ಕೆಲ ತಿಂಗಳುಗಳಿಂದ ಬಾಸಲ್ ನಲ್ಲಿರುವ ರಿಲಾಯನ್ಸ್ ಸಂಸ್ಥೆಗೆ ಸೇರಿದ ಮೊಬೈಲ್ ಟಾವರ್ ಸಂಪೂರ್ಣ ಸ್ಥಗಿತಗೊಂಡಿದ್ದು,ಸಾರ್ವಜನಿಕರಿಗೆ ತೀವೃ ತೊಂದರೆಯಾಗುತ್ತಿದೆ. ಈ ಗ್ರಾಮಕ್ಕೆ ಹೊರ ಜಗತ್ತಿನ ಸಂಪರ್ಕ ಕಡಿದುಹೊಗಿದೆ. ಈ ಬಗ್ಗೆ ರಿಲಾಯನ್ಸ್ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಸರಿಪಡಿಸದ ಕಾರಣ ದಿ. ೧೧-೯-೨೦೧೭ ಬೆಳಿಗ್ಗೆ ೯ .೩೦. ಗಂಟೆಗೆ ಯಲ್ಲಾಪುರ ತಾಲೂಕಿನ ಬಾಸಲ್ ನ ಕೃಷ್ಣ ದೇವಸ್ಥಾನ ಸಮೀಪದ ರಿಲಯನ್ಸ್ ಟಾವರ್ ಎದುರಿಗೆ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ ಹಾಗೂ ಕೈಗಾ- ಇಳಕಲ್ ರಾಜ್ಯ ಹೆದ್ದಾರಿ ಕೆಲಕಾಲ ಬಂದ್ ನಡೆಸಿ ರಿಲಾಯನ್ಸ ಅಧಿಕಾರಿಗಳಿಗೆ ಮನವಿ ನೀಡಲಿದ್ದು ಪ್ರತಿಭಟನಾ ಯಾರ್ಲಿಗೆ ಯಲ್ಲಾಪುರ ತಾಲೂಕು ವ್ಯಾಪ್ತಿಯ ಎಲ್ಲ ಸಂಘಟನೆ ಹಾಗೂ ಎಲ್ಲ ಜನಪ್ರತಿನಿಧಿಗಳು ಆಗಮಿಸಿ ನಮ್ಮ ಪ್ರತಿಭಟನೆಗೆ ಸಹಕಾರ ನೀಡಬೇಕೆಂದು ಗ್ರಾಮಸ್ತ ಗಣಪತಿ ವಾಗಳ್ಳಿ ಮನವಿ ಮಾಡಿದ್ದಾರೆ.

RELATED ARTICLES  ದಿನ ಬಳಕೆ ನೀರಿನಲ್ಲಿ ಸತ್ತ ಮೀನಿನ ವಾಸನೆ ; ಹೆಚ್ಚಿತು ಜನತೆಯ ಆತಂಕ.