ಕಾರವಾರ : ಮಹಿಳೆಯ ಹೊಟ್ಟೆಯಲ್ಲಿ ಬೆಳೆದಿದ್ದ 4 ಕೆ.ಜಿ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆಯಲು ಕ್ರಿಮ್ಸ್ ಅಧೀಕ್ಷಕ ಹಾಗೂ ಸ್ತ್ರೀ ರೋಗ ತಜ್ಞ ಡಾ. ಶಿವಾನಂದ ಹಾಗೂ ತಂಡ ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸೆಗೊಳಗಾದವರು ಕುಮಟಾದ ಮೀನುಗಾರ ಸಮಾಜದ ಮಹಿಳೆಯಾಗಿದ್ದು ಕಳೆದ 10 ತಿಂಗಳಿನಿಂದ ಪೈಬ್ರೆಡ್ ಗಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದರು.

RELATED ARTICLES  ಗೋಕರ್ಣ ದೇವಾಲಯವನ್ನು ಶ್ರೀ ಮಠಕ್ಕೆ ಹಸ್ತಾಂತರಿಸದ ಕಾರಣ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಲೀಗಲ್ ನೋಟಿಸ್!

ಕೆಲ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದರಾದರೂ ಥೈರೈಡ್ ಹಾಗೂ ರಕ್ತ ಹೀನತೆಯಿಂದ ಬಳಲುತ್ತಿದ್ದರಿಂದ ಶಸ್ತ್ರ ಚಿಕಿತ್ಸೆ ನಡೆಸಲು ಹಿಂಜರಿದ್ದಿದ್ದರೆನ್ನಲಾಗಿದೆ. ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಯ ರಕ್ಷಣೆ ಮಾಡಲಾಗಿದೆ. ವೈದ್ಯರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES  ದುರವಸ್ಥೆಯಲ್ಲಿರುವ ಶಿರಸಿ-ಕುಮಟಾ ಹೆದ್ದಾರಿ : ಹೇಳ ತೀರದು ವಾಹನ ಸವಾರರ ಗೋಳು