ಕುಮಟಾ : ತಾಲೂಕಿನ ಕುಮಾರಿ ಮಾನಸಿ ಶಾನಭಾಗ ಇತ್ತೀಚೆಗೆ ಪ್ರಕಟವಾದ ಜೆ.ಈ. ಮೇನ್ಸ್ ನಲ್ಲಿ ಬಾಚೂಲರ್ ಆಫ್ ಆರ್ಕಿ ಟಕ್ಚರ್ ನಲ್ಲಿ 898 ನೇ ರಾಂಕ್ ಮತ್ತು ಸಿ.ಇ.ಟಿ NATA ಫಲಿತಾಂಶದಲ್ಲಿ ಆರ್ಕಿ ಟಕ್ಚರ್ ನಲ್ಲಿ 575 ನೇ ರಾಂಕ್ ಪಡೆದು ಅತ್ಯುತ್ತಮ ಸ್ಥಾನವನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಹೊಸದೊಂದು ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ವಿಧಾತ್ರಿ ಅಕಾಡೆಮಿ ಸರಸ್ವತಿ ಪಿ‌.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅತ್ಯುತ್ತಮ ರೀತಿಯಲ್ಲಿ ಅಣಿಗೊಳಿಸಿರುವುದಕ್ಕೆ ಇದು ಸಾಕ್ಷಿ ಎನ್ನುವಂತಿದೆ. ವಿದ್ಯಾರ್ಥಿನಿಯ ಈ ಸಾಧನೆಗೆ ವಿಧಾತ್ರಿ ಅಕಾಡಮಿಯ ಮುಖ್ಯಸ್ಥರಾದ ಶ್ರೀ ಗುರುರಾಜ ಶೆಟ್ಟಿ, ಪ್ರಾಂಶುಪಾಲರಾದ ಮಹೇಶ ಉಪ್ಪಿನ್, ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ವಿಶ್ವಸ್ಥರು ಹಾಗೂ ಸಂಸ್ಥೆಯ ಶಿಕ್ಷಕರು ಮ ಇವಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES  ಹೆಗಡೆಯಲ್ಲಿ ಶಿಸ್ತಿನಿಂದ ತರಕಾರಿ ವಿತರಣೆ