ಕುಮಟಾ : ಕುಮಟಾದ ಸುತ್ತಮುತ್ತ ಚಿರತೆಗಳ ಕಾಟ ಹೆಚ್ಚುತ್ತಿದ್ದು ಚಿರತೆಗಳ ಓಡಾಟದ ಹೆಜ್ಜೆಗುರುತು ಹಾಗೂ ನಾಯಿ ಬೋನಿಗೆ ಬಿದ್ದ ಚಿರತೆ ಪ್ರಕರಣಗಳು ವರದಿಯಾದ ನಂತರ ಇದೀಗ ಕುಮಟಾದ ಜನತೆ ಬೆಚ್ಚಿ ಬೀಳುವಂತಹ ಸುದ್ದಿಯೊಂದು ಬಂದಿದೆ.

RELATED ARTICLES  ಯಶಸ್ವಿಯಾಗಿ ನಡೆದ ಕುಮಟಾ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ.

ಮನೆಗೆ ನುಗ್ಗಿದ ಚಿರತೆಯೊಂದು ಮಗುವನ್ನು ಹೊತ್ತೊಯ್ಯಲು ಪ್ರಯತ್ನಿಸಿದ ಘಟನೆ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ. ಬರ್ಗಿಯ ನಾರಾಯಣ ನಾಯ್ಕ ಎಂಬುವವರ ಮನೆಗೆ ರಾತ್ರಿ ವೇಳೆ ಮನೆಗೆ ನುಗ್ಗಿದ ಚಿರತೆ ಮನೆಯಲ್ಲಿದ್ದ ಚಿಕ್ಕ ಮಗುವಿನ ಮೇಳೆ ದಾಳಿ ನಡೆಸಿ ಹೊತ್ತೊಯ್ಯಲು ಪ್ರಯತ್ನಿಸಿದೆ.ಈ ವೇಳೆ ಮನೆಯ ಜನರು ಮಗುವನ್ನು ರಕ್ಷಿಸಿಕೊಂಡಿದ್ದಾರೆ. ಇನ್ನು ಕಳೆದ ಮೂರ್ನಾಲ್ಕು ದಿನದಿಂದ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಳ್ಳುತಿದ್ದು ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

RELATED ARTICLES  ಪತ್ರಿಕಾ ದಿನಾಚರಣೆಯ ನಿಮಿತ್ತ ತಾಲೂಕು ಮಟ್ಟದ ಭಾಷಣೆ ಸ್ಪರ್ಧೆ