ಕುಮಟಾ : ತಾಲೂಕಿನ ಹೊಳೆಗದ್ದೆ ಟೋಲ್ ಗೇಟ್ ನಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ಶುಲ್ಕ ಪಡೆದಿದ್ದನ್ನು ಖಂಡಿಸಿ ಕರವೇ ಗಜಸೇನೆ ಹೊನ್ನಾವರ ಘಟಕದವರು ಟೋಲ್ ಮ್ಯಾನೇಜರ್ ಹಾಗೂ ಸಿಬ್ಬಂದಿಯನ್ನು ಇಂದು ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಸದಾ ಒಂದಿಲ್ಲೊಂದು ಕಾರಣಕ್ಕೆ ಈ ಟೋಲ್ ಗೇಟ್ ಸುದ್ದಿಯಾಗುತ್ತಿದ್ದು, ಈ ಹಿಂದಿನಿಂದಲೂ ಒಂದಿಲ್ಲೊಂದು ಹೋರಾಟಗಳು ಹಾಗೂ ಪ್ರತಿಭಟನೆಗೆ ಸಾಕ್ಷಿಯಾಗಿದೆ.

ಇಂದು ಕರವೇ ಗಜಸೇನೆ ಹೊನ್ನಾವರ ಘಟಕದವರು ಸ್ಥಳೀಯ ನೋಂದಣಿ ಇರುವ ವಾಹನವನ್ನು ತಡೆದು ಶುಲ್ಕ ವಸೂಲಿ ಮಾಡಲು ಮುಂದಾದಾಗ ಕರವೇ ಗಜ ಸೇನೆಯ ಕಾರ್ಯಕರ್ತರು ರೊಚ್ಚಿಗೆದ್ದು ಮ್ಯಾನೇಜರ್ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಕರವೇ ಗಜಸೇನೆಯ ಹೊನ್ನಾವರ ಘಟಕದ ಅಧ್ಯಕ್ಷರಾದ ಗಣೇಶ್ ನಾಯ್ಕ ಅವರು ಟೋಲ್ ನವರನ್ನು ಉದ್ದೇಶಿಸಿ ಹಿಂದೆ ಹಲವು ಬಾರಿ ಹೋರಾಟ ಮಾಡಿದರು ಕೂಡ ಪುನಃ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿ ಇದೇ ರೀತಿ ಮುಂದುವರೆದರೆ ಟೋಲ್ ಗೇಟ್ ಗೆ ಮುತ್ತಿಗೆ ಹಾಕಿ ಧ್ವಂಸ ಮಾಡುತ್ತೇವೆ ಎಚ್ಚರಿಕೆ ನೀಡಿದ್ದಾರೆ. ಕೆಲಕಾಲ ಟೋಲ್ ಸಿಬ್ಬಂದಿ-ಗಜಸೇನೆಯ ಮಧ್ಯೆ ವಾಗ್ವಾದ ನಡೆಯಿತು. ತದನಂತರ ಮುಂದಿನ ದಿನಗಳಲ್ಲಿ ಸ್ಥಳೀಯ ನೊಂದಣಿ ಇರುವ ವಾಹನಕ್ಕೆ ಟೋಲ್ ಶುಲ್ಕ ತೆಗೆದುಕೊಳ್ಳುವುದಿಲ್ಲ ಎಂದು ಟೋಲ್ ಮ್ಯಾನೇಜರ್‌ ತಿಳಿಸಿ ವಾಹನ ತೆರಳಲು ಅನುವು ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಕರವೇ ಗಜಸೇನೆಯ ಜಿಲ್ಲಾ ಕೋಶಾಧ್ಯಕ್ಷರಾದ ನೀಲಕಂಠ ನಾಯ್ಕ ಜಿಲ್ಲಾ ಮಾಧ್ಯಮ ವಕ್ತಾರ ರಾಜೇಶ್ ನಾಯ್ಕ ಇದ್ದರು.

RELATED ARTICLES  ಜಿಲ್ಲಾ ಮಟ್ಟದ ಕಲಿಕಾ ಹಬ್ಬಕ್ಕೆ ತೆರೆ. ಸಂಭ್ರಮಿಸಿದ ಮಕ್ಕಳು.