ಕದಿರು ಹರಣೋತ್ಸವ ಸಂಪನ್ನ

ಗೋಕರ್ಣದ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಪ್ಲವ ಸಂವತ್ಸರದ ಕದಿರು ಹರಣೋತ್ಸವ ಶಾಸ್ತ್ರೀಯ, ರೂಢಿಗತ ಪರಂಪರೆಯಂತೆ ಇಂದು ಸಂಪನ್ನಗೊಂಡಿತು. ಬಾವಿಕೊಡ್ಲದ ದೇವರ ಗದ್ದೆಯಲ್ಲಿ ಬೆಳಗಿನ ಜಾವ ಸಾರ್ವಭೌಮ ಮಹಾಬಲೇಶ್ವರ ದೇವರಿಗೆ ಮೊದಲ ಕದಿರನ್ನು ಸಮರ್ಪಿಸಲಾಯಿತು. ನೂತನ ಕದಿರಿಗೆ ಪೂಜೆ ಸಲ್ಲಿಸಿದ ನಂತರ ಹೊಸ ಅಕ್ಕಿಪ್ರಸಾದ ವಿತರಣೆ ನಡೆಯಿತು. ಉತ್ಸವ ಬರುವ ವೇಳೆ ರೈತರು ತಾವು ಬೆಳೆದ ಫಸಲಿನ ಕದಿರನ್ನು ದೇವರಿಗೆ ಸಮರ್ಪಿಸಿ, ನಂತರ ತಮ್ಮ ಮನೆಯಲ್ಲಿ ಕದಿರು ಪೂಜೆ ಕೈಗೊಳ್ಳುತ್ತಾರೆ. ಶ್ರೀ ದೇವರ ಉತ್ಸವವು ದಾರಿಯುದ್ದಕ್ಕೂ ಪ್ರಸಾದ ರೂಪದಲ್ಲಿ ನೂತನ ಭತ್ತದ ಕದಿರನ್ನು ವಿತರಿಸುತ್ತ ಶ್ರೀ ದೇವಾಲಯಕ್ಕೆ ಹಿಂತಿರುಗಿತು. ಶ್ರೀ ದೇವಾಲಯದ ನಂದಿ ಮಂಟಪದಲ್ಲಿ ನೂತನ ಕದಿರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

RELATED ARTICLES  ಕುಮಟಾ ಅರ್ಬನ್ ಕೋ-ಆಪರೇಟೀವ್ ಬ್ಯಾಂಕ್‌ಗೆ ಈ ವರ್ಷ ೪೪.೮೨ ಲಕ್ಷ ನಿವ್ವಳ ಲಾಭ.

ಬೈಕ್ ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ

ಚಲಿಸುತ್ತಿದ್ದ ಮೋಟಾರ್ ಬೈಕ್‌ವೊಂದಕ್ಕೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ಕೋಣಾರ ಹದ್ದೂರಿನಲ್ಲಿ ಇಂದು ನಡೆದಿದೆ. ಗಾಯಗೊಂಡವರನ್ನು ತಾಲೂಕಿನ ಹದ್ದೂರು ನಿವಾಸಿ ಶೇಖರ ತಿಮ್ಮಪ್ಪಗೊಂಡ ಎಂದು ಗುರುತಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕ್ಕೆ ಸಾಗಿಸಲಾಗಿದೆ. ಆರೋಪಿ ರಿಕ್ಷಾ ಚಾಲಕ ಮಹೇಶ ಈರಪ್ಪ ನಾಯ್ಕ ಸೋಡಿಗದ್ದೆ ಇವರ ವಿರುದ್ಧಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಪಕ್ಷೇತರ ಅಭ್ಯರ್ಥಿಯಾಗಿ ಶಾರದಾ ಮೋಹನ ಶೆಟ್ಟಿ ನಾಮಪತ್ರ ಸಲ್ಲಿಕೆ.

ದೇವಿದಾಸ ನಾರಾಯಣ ಭಟ್ಟ ನಿಧನ.

ಭಟ್ಕಳದ ವೀರಮಾರುತಿ ದೇವಸ್ಥಾನದ ಅರ್ಚಕ, ವೈದಿಕರೂ ಆದ ದೇವಿದಾಸ ನಾರಾಯಣ ಭಟ್ಟ ಇಂದು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರಿ, ಪುತ್ರ ರಾಮಕೃಷ್ಣ ಭಟ್ಟ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಶ್ಯಾಮಲಾ ರಮೇಶ ಪ್ರಭು ಇನ್ನಿಲ್ಲ.

ಭಟ್ಕಳದ ನ್ಯೂ ಇಂಗ್ಲೀಷ್ ಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ಆರ್‌.ಡಿ. ಪ್ರಭು ಅವರ ಧರ್ಮಪತ್ನಿ ಶ್ಯಾಮಲಾ ರಮೇಶ ಪ್ರಭು ಅವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ನಿಧನರಾದರು. ಮೃತರು ಪತಿ ಆರ್.ಡಿ. ಪ್ರಭು, ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.