ಕುಮಟಾ :ನಗರದ ಭಾರತೀಯ ಕುಟುಂಬ ಯೋಜನಾ ಸಂಘದಲ್ಲಿ ಗಾಂಧೀಜಿ ಹಾಗೂ ಶಾಸ್ತ್ರೀ ಜೀ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಕುಟುಂಬ ಯೋಜನಾ ಆಸ್ಪತ್ರೆ ಕುಮಟಾ ನಗರದಲ್ಲಿ ಅನೇಕ ಗ್ರಾಮೀಣ ಭಾಗದ ಬಡಜನರ ಪಾಲಿಗೆ ವರದಾನವಾಗಿ ಕೆಲಸ ಮಾಡುತ್ತಿದೆ… ಆಸ್ಪತ್ರೆಯ ನಿರ್ವಹಣೆಗೆ ಅನೇಕ ದಾನಿಗಳು ಬಡಜನರ ಸೇವೆಗಾಗಿ ನೆರವು ನೀಡುತ್ತಾರೆ.. ಶನಿವಾರ ಆಸ್ಪತ್ರೆಯ ಕಛೇರಿಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರೀ ಜೀ ಯವರ ಜಯಂತಿ ಆಚರಣೆಯ ಅಂಗವಾಗಿ ಏಳು ದಿನಗಳ ಕಾಲ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನದ ಸಮಾರೋಪ ಕಾರ್ಯಕ್ರಮವನ್ನು ಆಸ್ಪತ್ರೆ ಯ ಅಧ್ಯಕ್ಷ ರಾದ ಡಾ ಅಶೋಕ ಭಟ್ಟ ಹಳ್ಕಾರ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಅಂತಿಮ ದಿನದ ಸ್ವಚ್ಛತಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದ ಡಾ ಅಶೋಕ ಭಟ್ಟ ರವರು ಗಾಂಧೀಜಿಯವರ ಆಶಯದಂತೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಜಾರಿಗೆ ತಂದ ಸ್ವಚ್ಛತಾ ಅಭಿಯಾನ ಕ್ಕೆ ಕೈಜೋಡಿಸುವಂತೆ ನಾವು ಏಳು ದಿನಗಳ ಕಾಲ ಆಸ್ಪತ್ರೆಯ ಒಳ ಭಾಗ, ಕಛೇರಿ ಹಾಗೂ ಆವರಣವನ್ನು ಸ್ವಚ್ಛ ಗೊಳಿಸಿದ್ದೇವೆ ಇಂದಿನ ದಿನಗಳಲ್ಲಿ ಕಸವನ್ನು ಮತ್ತೆ ಬಳಕೆಗೆ ಬರುವಂತೆ ಮಾಡಲಾಗುತ್ತಿದೆ ಸ್ವಚ್ಛತೆ ಕೇವಲ ಹೊರಗಷ್ಟೆ ಇರಬಾರದು ನಮ್ಮ ದೇಹ ಮನಸ್ಸು ನ್ನು ಕೂಡ ಸ್ವಚ್ಛ ವಾಗಿಟ್ಟುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ಖಜಾಂಚಿ ಬೀರಣ್ಣ ನಾಯಕ, ಮೇನೇಜರ್ ಸಂತಾನ ಯೂಯಿಸ್, ಲೆಕ್ಕಾಧಿಕಾರಿ ಗಣಪತಿ ಭಟ್ಟ ಸೂರಿ, ಕಾರ್ಯಕ್ರಮ ಅಧಿಕಾರಿ ಮಂಜುಳಾ ಗೌಡ, ಭಾರತಿ ಸಿಸ್ಟರ್, ಶೆರ್ಲಿ ಸಿಸ್ಟರ್, ನಾಗರತ್ನ ಸಿಸ್ಟರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು