ಕುಮಟಾ : ಗ್ರಾಮ ಪಂಚಾಯತ ವತಿಯಿಂದ ಚಿತ್ರಿಗಿ-ಮದ್ಗುಣಿ ರುದ್ರ ಭೂಮಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಯಾರಿಗೂ ತಿಳಿಯದ ಹಾಗೆ ಸರ್ವೆ ನಡೆಸಿದ್ದರ ಬಗ್ಗೆ ತಿಳಿದುಬಂದಿದೆ ಎಂಬ ವಿಚಾರಕ್ಕೆ ಚಿತ್ರಿಗಿ-ಮದ್ಗುಣಿಯ ಊರ ನಾಗರೀಕರು ವಿರೋಧ ವ್ಯಕ್ತಪಡಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಈ ಹಿಂದೆ ಇಲ್ಲಿ ಘಟಕ ಸ್ಥಾಪಿಸಲು ವಿರೋಧವಿರುವ ಕುರಿತು ತಿಳಿಸಿದ್ದು ಇದೀಗ ಯಾರ ಗಮನಕ್ಕೂ ತಾರದೇ ರುದ್ರ ಭೂಮಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಹುನ್ನಾರ ನಡೆಸಿದ್ದು ಇದು ಖಂಡನೀಯ ಸ್ಮಶಾನ ಭೂಮಿ ಕೇವಲ ಸ್ಮಶಾನಕ್ಕಾಗಿಯೇ ಮೀಸಲಿಟ್ಟ ಜಾಗವಾಗಿದ್ದು ಇಲ್ಲಿ ಘಟಕ ಸ್ಥಾಪನೆ ಮಾಡುವುದು ಧಾರ್ಮಿಕ ಆಚಾರ ವಿಚಾರ ಭಾವನೆಗಳಿಗೆ ಧಕ್ಕೆ ತರುವಂತದ್ದಾಗಿರುತ್ತದೆ. ಹಾಗೂ ಈ ರುದ್ರ ಭೂಮಿ ಪಕ್ಕದಲ್ಲೇ ಜಲನಿರ್ಮಲ ಯೋಜನೆಯ ಕುಡಿಯುವ ನೀರಿನ ಟ್ಯಾಂಕ ಹಾಗೂ ತೆರೆದ ಬಾವಿ ಇದ್ದು ಘಟಕ ಸ್ಥಾಪಿಸಿದ್ದಲ್ಲಿ ಕಸದ ರಾಶಿ ಹಾಗೂ ಮಳೆಗಾಲದ ನೀರು ಬಾವಿಯಲ್ಲಿ ತುಂಬಿ ಕಲುಷಿತವಾಗುವ ಸಂಭವವಿರುತ್ತದೆ. ಕಾರಣ ಈ ಕುರಿತು ರುದ್ರ ಭೂಮಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ವಿರೋಧಿಸುತ್ತಿದ್ದೇವೆ ಎಂದು ತಿಳಿಸಿದರು.
ಕುರಿತು ಈ ಹಿಂದೆ ಸಮಸ್ತ ಊರ ನಾಗರಿಕರು ತಿಳಿಸಿದ್ದರೂ ನೀವು ಯವುದೋ ಒತ್ತಡಕ್ಕೆ ಮಣಿದು ಇಲ್ಲಿ ಘಟಕ ಸ್ಥಾಪಿಸಲು ಪ್ರಯತ್ನಿಸುತ್ತಿರುವುದು ತೀರಾ ವಿಷಾದನೀಯ. ಕಾರಣ ರುದ್ರ ಭೂಮಿಗಾಗಿಯೇ ಮೀಸಲಿರುವ ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಘಟಕ ಸ್ಥಾಪಿಸಬಾರದು ಎಂದು ಒತ್ತಾಯಿಸಿದರು.