ಯಲ್ಲಾಪುರ: ಯುವಕನೋರ್ವ ಬಯಲಿನಲ್ಲಿ ಕುಳಿತಿರುವಾಗ ಹಾವೊಂದು ಕಡಿದು ಯುವಕ ಆಸ್ಪತ್ರೆಗೆ ದಾಖಲಾದ ಪ್ರಕರಣ ವರದಿಯಾಗಿದೆ. ತಾಲ್ಲೂಕಿನ ಬೊಂಬಡಿಕೊಪ್ಪದಲ್ಲಿ 21 ವರ್ಷದ ವ್ಯಕ್ತಿಯೊರ್ವನಿಗೆ ಹಾವೊಂದು ಮೂತ್ರ ವಿಸರ್ಜಿಸುವ ಜಾಗಕ್ಕೆ ಕಚ್ಚಿದ್ದು, ಚಿಕಿತ್ಸೆಗಾಗಿ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು.
ತಾಲ್ಲೂಕಿನ ಬೊಂಬಡಿ ಕೊಪ್ಪದ ವ್ಯಕ್ತಿಯೋರ್ವನು (ಹೆಸರು ಹೇಳಲಿಚ್ಛಿಸಿಲ್ಲ) ಬಯಲಲ್ಲಿ ಕುಳಿತಿರುವಾಗ ಹುಲ್ಲಿನ ಮದ್ಯದಲ್ಲಿದ್ದ ಹಾವೊಂದು ಮರ್ಮಾಂಗಕ್ಕೆ ಕಚ್ಚಿದೆ ಎನ್ನಲಾಗಿದೆ. ತಕ್ಷಣ ಯುವಕ ಭಯಭೀತಗೊಂಡಿದ್ದಾನೆ. ನಂತರ ಮನೆಯವ ಸಹಾಯದಿಂದ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ್ದು, ಆತ ಸುಧಾರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯ ಪತ್ರಿಕೆಯೊಂದು ವರದಿಮಾಡಿದ್ದು, ವ್ಯಕ್ತಿಯ ಆರೋಗ್ಯ ಸುಧಾರಿಸುತ್ತಿದೆ ಎನ್ನಲಾಗಿದೆ.