ಯಲ್ಲಾಪುರ : ಕೆಮಿಕಲ್ ತುಂಬಿದ ಲಾರಿಯೊಂದು ಸ್ಫೋಟಗೊಂಡು ನಡುರಸ್ತೆಯಲ್ಲಿ ಹೊತ್ತಿ ಉರಿದ ಘಟನೆಯೊಂದು ವರದಿಯಾಗಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಜನತೆ ಹಾಗೂ ವಾಹನ ಸವಾರರು ಭಯಬೀತಗೊಂಡ ಘಟನೆ ಇದಾಗಿದೆ.
ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ ಆರ್ತಿಬೈಲ್ ಇಡಗುಂದಿ ಬಳಿ ಕೆಮಿಕಲ್ ತುಂಬಿದ ಲಾರಿಯೊಂದು ಪಲ್ಟಿಯಾಗಿ ನಂತರ ಸ್ಫೋಟಗೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಹರಹಾಸ ಪಡುತ್ತಿದ್ದಾರೆ. ಲಾರಿಗೆ ಹೊತ್ತಿಕೊಂಡ ಬೆಂಕಿ ನಂತರದಲ್ಲಿ ಸುತ್ತಮುತ್ತಲಿನ ಬೆಟ್ಟಕ್ಕೂ ಬೆಂಕಿ ಆವರಿಸಿದ್ದು ಜನರನ್ನು ಇನ್ನಷ್ಟು ಭಯಪಡುವಂತೆ ಮಾಡಿದೆ. ಕೆಮಿಕಲ್ ನಿಂದಾಗಿಯೇ ಈ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೆಳ್ಳಂಬೆಳಿಗ್ಗೆ ಟ್ಯಾಂಕರ್ ವೊಂದು ಸ್ಫೋಟಗೊಂಡ ಪರಿಣಾಮ ಜನರು ಆತಂಕಗೊoಡಿದ್ದಾರೆ. ಏನೋ ಸ್ಫೋಟವಾಯಿತು. ಕೂಡಲೇ ಬೆಂಕಿ ಆವರಿಸಿಕೊಂಡಿದ್ದು, ಆತಂಕದ ಸ್ಥಿತಿ ನಿರ್ಮಾಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.