ಕುಮಟಾ: ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ವಾಣಿಜ್ಯ ಪದವಿಯಲ್ಲಿ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ದೀಪಾ ಭಟ್ಟ 2 ಬಂಗಾರದ ಪದಕ ಮತ್ತು 5 ಪ್ರಮಾಣ ಪತ್ರದೊಂದಿಗೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಧಾರವಾಡದಲ್ಲಿ ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಉಪ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸ್ಸಿ ಅವರು ದೀಪಾ ಭಟ್ಟ ಅವರನ್ನು ಗೌರವಿಸಿ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕೆನರಾ ಕಾಲೇಜು ಸೊಸೈಟಿಯ ಪದವಿ ವಾಣಿಜ್ಯ ವಿಭಾಗದಲ್ಲಿ ವಿಶ್ವ ವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದು ಇದೇ ಪ್ರಥಮ. ದೀಪಾ ಭಟ್ಟ ಗ್ರಾಮೀಣ ಶಾಲೆಯಲ್ಲಿ ಓದಿದ್ದು ಹಳ್ಳಿಯಿಂದ ಹೋಗಿ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ 157 ಪದವಿ ಕಾಲೇಜಿನ ಹತ್ತಾರು ಸಾವಿರ ಪದವಿ ವಿದ್ಯಾರ್ಥಿಗಳ ನಡುವೆ ಪ್ರಥಮ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.ಕೆನರಾ ಕಾಲೇಜು ಸೊಸೈಟಿಯ ಅಧ್ಯಕ್ಷರಾದ ರಘು ಪಿಕಳೆ, ಉಪಾಧ್ಯಕ್ಷ ಪುರುಷೋತ್ತಮ್ ಶಾನಭಾಗ್, ಕಾರ್ಯಾಧ್ಯಕ್ಷ ಡಿ.ಎಂ.ಕಾಮತ, ಕಾರ್ಯದರ್ಶಿ ಸುಧಾಕರ ನಾಯಕ, ಪ್ರಾಚಾರ್ಯ ಡಾ.ಎಸ್.ವಿ.ಶೇಣ್ವಿ ಅಭಿನಂದಿಸಿದ್ದಾರೆ.
ಈಕೆ ಡಾ.ಎ. ವಿ. ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಸ್ನಾತ್ತಕೋತ್ತರ ವಿಭಾಗದಲ್ಲಿ M.COM ಅಧ್ಯಯನ ಮಾಡುತ್ತಿದ್ದು. ವಾಣಿಜ್ಯ ಶಾಸ್ತ್ರದಲ್ಲಿ ಪಿಎಚ್‌ಡಿ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸಂಶೋಧನೆಯನ್ನು ಕೈ ಗೊಂಡು ಬಡತನ, ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಗುರಿ ಹೊಂದಿದ್ದಾರೆ.