ಹೊನ್ನಾವರ: ಸಾಮಾಜಿಕ ಜಾಲತಾಣದ ಹೆಸರಿನಲ್ಲಿ ಮೋಸ ಮಾಡುವ ದೊಡ್ಡ ಜಾಲವೇ ಇದೆ. ಫೋನ್ ಕರೆಗಳನ್ನು ಮಾಡಿ ಹಣ ಎಗರಿಸುವ ಅದೆಷ್ಟೋ ಪ್ರಕರಣಗಳು ವರದಿಯಾಗುತ್ತಿದೆ. ಅಂತಹುದೇ ಒಂದು ಪ್ರಕರಣ ಹೊನ್ನಾವರದಲ್ಲಿ ನಡೆದಿದೆ.ತಾಲೂಕಿನ ಕಾಸರಕೋಡ ಮೂಲದ ಮೈದೀನ್ ಖಾಸೀಂ ಸಾಬ್ ವಂಚನೆಗೊಳಗಾಗಿದ್ದು, ಕಾರವಾರದ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾನೆ.

ಜಾಹೀರಾತಿನ ಲಿಂಕ್ ಅನ್ನು ಒತ್ತಿ ವ್ಯಕ್ತಿಯೊಬ್ಬ ತನ್ನ ಖಾತೆಯಲ್ಲಿದ್ದ ಹಣ ಕಳೆದುಕೊಂಡಿದ್ದಾನೆ. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದ ಖಾತೆಯನ್ನು ನೋಡುತ್ತಿರುವಾಗ ಡಿಜಿಟಲ್ ಇಂಡಿಯಾ ಸಿಎಸ್‌ಪಿ ಪಾಯಿಂಟ್ ಮಿನಿ ಬ್ಯಾಂಕ್ ಜಾಹೀರಾತು ಕಾಣಿಸಿಕೊಂಡಿದೆ. ಇದರ ಬಗ್ಗೆ ತಿಳಿದುಕೊಳ್ಳಲು ಲಿಂಕ್ ಕ್ಲಿಕ್ ಮಾಡಿದ್ದರು. ಮಾರನೇ ದಿನ ಸಿಎಸ್‌ಪಿ ಕಂಪನಿ ಕಡೆಯಿಂದ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದು, ಮಿನಿ ಬ್ಯಾಂಕ್ ಎನ್ನುವ ಆ್ಯಪ್ ಇದೆ. ಅದನ್ನು ಬಳಸುವಂತೆ ತಿಳಿಸಿದ್ದಾನೆ. ನೀವು ಮಿನಿ ಬ್ಯಾಂಕ್ ತೆರೆದು ಹಣಕಾಸಿನ ವ್ಯವಹಾರ ನಿರ್ವಹಿಸಲು ಎರಡು ಕಂಪ್ಯೂಟರ್, ನಾಲ್ಕು ಸಿ.ಸಿ ಟಿವಿ ಕ್ಯಾಮೆರಾ ಕಳುಹಿಸುತ್ತೇವೆ. ಹಣ ವರ್ಗಾವಣೆ ಮಾಡಿದರೆ ಕಮೀಷನ್ ಕೊಡುತ್ತೇವೆ ಎಂದು ನಂಬಿಸಿದ್ದಾರೆ.

RELATED ARTICLES  ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ಉ.ಕ ಜಿಲ್ಲೆಯ ನೆರವಿಗೆ ಧಾವಿಸಿದ ಇನ್ಫೋಸಿಸ್‌ನ ಮುಖ್ಯಸ್ಥೆ ಸುಧಾಮೂರ್ತಿ..!

ಮಿನಿ ಬ್ಯಾಂಕ್ ತೆರೆಯಲು ಹತ್ತು ಸಾವಿರದ ಒಂದು ನೂರು ರೂಪಾಯಿ ಅನ್ನು ಕಂಪನಿಯ ಖಾತೆಗೆ ಜಮಾ ಮಾಡುವಂತೆ ತಿಳಿಸಿದಾಗ ನಂಬಿದ ಮೈದೀನ್ ಹಣ ವರ್ಗಾಯಿಸಿದ್ದಾರೆ. ಮಾರನೇ ದಿನ ಮತ್ತೆ ಕಂಪೆನಿಯವ ಎಂದು ಹೇಳಿಕೊಂಡು ಕರೆ ಮಾಡಿದ ವಂಚಕರು, ನಿಮ್ಮ ಖಾತೆಯಲ್ಲಿ 50 ಸಾವಿರ ಹಣ ಇರಬೇಕು. ಅದನ್ನ ಐಆರ್‌ಬಿಯವರು ಪರಿಶೀಲಿಸಲಿದ್ದಾರೆ. ಒಂದು ಗಂಟೆಯ ನಂತರ ನಿಮ್ಮ ಹಣವನ್ನು ವಾಪಸ್ ನಿಮ್ಮ ಖಾತೆಗೆ ವರ್ಗಾಯಿಸುತ್ತೇವೆ ಎಂದು ತಿಳಿಸಿದ್ದಾರೆ.

RELATED ARTICLES  ಹೊನ್ನಾವರ ಮೂಲದ ಕರ್ನಾಟಕ ವಿಶ್ವಾವಿದ್ಯಾಲಯದಲ್ಲಿ ಸಾಂಶೋಧನಾ ವಿದ್ಯಾರ್ಥಿ ಸಾವು

ಇದನ್ನೂ ನಂಬಿದ ಮೈದೀನ್ 50 ಸಾವಿರ ಹಣವನ್ನು ವಂಚಕರು ಹೇಳಿದ ಖಾತೆಗೆ ವರ್ಗಾಯಿಸಿದ್ದಾರೆ. ಆದರೆ ನಂತರ ಕಂಪನಿಯವರ ಪ್ರತಿಕ್ರಿಯೆ ಇಲ್ಲದಿರುವುದನ್ನು ಕಂಡಾಗ ಮೈದೀನ್‌ಗೆ ತಾವು ಮೋಸ ಹೋಗಿದ್ದು ಅರಿವಾಗಿದೆ.