ಹೊನ್ನಾವರ : ಯುವತಿಯರ ನಾಪತ್ತೆ ಪ್ರಕರಣ ಮತ್ತೆ ವರದಿಯಾಗಿದ್ದು, ಹೊನ್ನಾವರ ತಾಲೂಕಿನ ಚಿಕ್ಕನಕೋಡ ಮೂಲದ ತಾಲೂಕಿನ ಸರ್ಕಾರಿ ಪದವಿ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿಯೊಬ್ಬಳು ತನ್ನ ಮಾರ್ಕ್ಸ್ ಕಾರ್ಡ್ ತರುತ್ತೇನೆಂದು ಮನೆಯಲ್ಲಿ ಹೇಳಿ ಬಂದವಳು ನಾಪತ್ತರಯಾಗಿತುವ ಘಟನೆ ವರದಿಯಾಗಿದೆ.
ಈಕೆ ತನ್ನ ಮಾರ್ಕ್ಸ್ ಕಾರ್ಡ ತರಲು ಬಂದವಳು ಮರಳಿ ಮನೆಗೂ ಬಂದಿಲ್ಲ ಸಂಬಂಧಿಕರ ಮನೆಗೂ ಹೋಗಿಲ್ಲ. ಎಲ್ಲಿ ಹೋಗಿದ್ದಾಳೆಂದು ಗೊತ್ತಿಲ್ಲ ಎಂದು ಪಾಲಕರು ಪೊಲೀಸರ ಮೊರೆ ಹೋಗಿದ್ದಾರೆ.
ಕುಮಾರಿ ಗಾಯತ್ರಿ ನಾಯ್ಕ ಎಂಬಾಕೆಯೇ ಕಾಣೆಯಾದ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ದಿನಾಂಕ 09-10-2021 ರಂದು 10 ಗಂಟೆ ಸುಮಾರಿಗೆ ಹೊನ್ನಾವರದಲ್ಲಿರುವ ಕಾಲೇಜಿಗೆ ಹೋಗಿ ಮಾರ್ಕ್ಸ್ ಕಾರ್ಡ್ ತರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದಳು ಎನ್ನಲಾಗಿದೆ.
ಆದರೆ ಸಂಜೆಯಾದರೂ ಮಗಳು ಮನೆಗೆ ಬರದಿದ್ದಾಗ ಆತಂಕಗೊಂಡ ಪಾಲಕರು ನೆಂಟರಿಷ್ಟರ ಮನೆಯೂ ಸೇರಿದಂತೆ ಬಹುತೇಕ ಕಡೆ ಹುಡುಕಿದರೂ ವಿದ್ಯಾರ್ಥಿನಿಯ ಪತ್ತೆಯಾಗಿಲ್ಲ. ದಿಕ್ಕು ತೋಚದಂತಾದ ಪಾಲಕರು 11 ನೇ ತಾರೀಕು ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಮಗಳನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಈಕೆಯ ಸುಳಿವು ಎಲ್ಲಾದರೂ ಕಂಡುಬಂದಲ್ಲಿ ಹೊನ್ನಾವರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08387-220248 ಗೆ ಕರೆ ಮಾಡಿ ತಿಳಿಸುವಂತೆ ಕೋರಿದ್ದಾರೆ.