ಕಾರವಾರ: ಕಾರವಾರ-ಮಡಗಾಂವ ನಡುವೆ ಸಂಚರಿಸುತ್ತಿದ್ದ ವಿಶೇಷ ಡೆಮು ರೈಲ್ವೆಯು ಇದೇ ಅ.18ರಿಂದ ಪುನರಾರಂಭಗೊಳ್ಳಲಿದೆ ಎಂದು ಸಂಸದ ಅನಂತಕುಮಾರ ಹೆಗಡೆ ತಮ್ಮ ಆಪ್ತ ಕಾರ್ಯದರ್ಶಿ ಮೂಲಕ ತಿಳಿಸಿದ್ದಾರೆ.
ಸಾರ್ವಜನಿಕರು ತಮ್ಮ ದೈನಂದಿನ ಕೆಲಸಗಳಿಗೆ, ಉದ್ಯೋಗ, ವ್ಯಾಪಾರಕ್ಕಾಗಿ ಕಾರವಾರದಿಂದ ಮಡಗಾಂವಕ್ಕೆ ತೆರಳಲು ಸೂಕ್ತ ಸಮಯದಲ್ಲಿ ರೈಲ್ವೆಯು ಲಭ್ಯವಿಲ್ಲದ ಕಾರಣಕ್ಕಾಗಿಯೇ ಈ ವಿಶೇಷ ರೈಲ್ವೆಯನ್ನು ಈ ಹಿಂದೆ ಪ್ರಾರಂಭಿಸಲಾಗಿತ್ತು. ಕೋವಿಡ್ ಕಾರಣದಿಂದಾಗಿ ಪ್ರಯಾಣಿಕರ ಕೊರತೆಯಿಂದ ಸ್ಥಗಿತಗೊಳಿಸಲಾಗಿತ್ತು. ಈಗ ಪುನರ್ ಪ್ರಾರಂಭವಾಗಲಿದ್ದು ಇದರಿಂದ ಜನತೆಗೆ ತುಂಬಾ ಪ್ರಯೋಜನ ಪಡೆದುಕೊಳ್ಳಿ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.