ಕುಮಟಾ : ಸಂಗೀತಾ ಎನ್ನುವ ಮಹಿಳೆಯೊಬ್ಬಳು ಅನೇಕ ವರ್ಷಗಳಿಂದ ಮಿರ್ಜಾನ ಜನರಿಗೆ ಪರಿಚಯ, ಆದರೆ ಇವಳು ಎಲ್ಲಿಯವಳು ಎನ್ನುವುದು ನಿಖರವಾಗಿ ತಿಳಿದಿಲ್ಲ..ಆದರೆ ಈಕೆ ಮಾಡುವ ಅವಾಂತರ ಒಂದಲ್ಲ ಎರಡಲ್ಲ. ಸಾರ್ವಜನಿಕರ ಅಭಿಪ್ರಾಯದಂತೆ ಸದಾ ಎಣ್ಣೆ ಮತ್ತಲ್ಲಿ ಇರುವ ಈಕೆ, ನೋಡುವುದಕ್ಕೆ ಪಕ್ಕಾ ಸಾಧ್ವಿ. ಬಡವಳಂತೆ ಕಾಣುವ ಇವಳು ಹೊಂದಿರುವ ಗುಣ ಮಾತ್ರ ಪಕ್ಕಾ ಖತರನಾಕ್ ಅಂತಾರೆ ಸಾರ್ವಜನಿಕರು.

ಹೌದು… ಕೆಲವು ದಿನಗಳಿಂದ ಮಿರ್ಜಾನ ಸರಕಾರಿ ಕಟ್ಟಡ,ಅಂಗಡಿಯ ಮುಂದೆ ಮಲಗುವುದು ಜೊತೆಗೆ ಅಲ್ಲಿಯೇ ಗಲಿಜು ಮಾಡುವುದು ಜಗಲವಾಡುವುದು ಹಾಗೂ ಇತರ ಕಾಯಕ ಮಾಡಿಕೊಂಡಿದ್ದಾಳೆ. ಯಾರಾದರೂ ಬಯ್ಯಲು ಮುಂದಾದರೆ ಬಾಯಿಗೆ ಬಂದ ಹಾಗೆ ಮಾತನಾಡಿ ಪೋಲಿಸ್ ದೂರು ನೀಡುವುದಾಗಿ ಹೆದರಿಸುತ್ತಾಳೆ.

RELATED ARTICLES  ಇಂದಿನ(ದಿ-25/10/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ

ಇದಲ್ಲದೆ ಸರಕಾರಿ ಕಚೇರಿ ಹೊರಂಗಣವನ್ನು ವಸತಿ ಮಾಡಿಕೊಂಡಿದ್ದು ಅಶುದ್ಧತೆಯ ತಾಣ ಮಾಡಿಕೊಂಡಿದ್ದಾಳೆ. ಇಷ್ಟೇ ಆದರೂ ಸುಮ್ಮನೆ ಇರಬಹುದಿತ್ತು ಆದರೆ ಇಬ್ಬರು ಪುರುಷರು ಇವಳಿಗಾಗಿ ಸದಾ ಜಗಳವಾಡುತ್ತಾ ಮಾರಕವಾಗಿ ಹೊಡೆದಾಡಿಕೊಂಡಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು ಮುಂದೆ ನಡೆಯುವ ಅನಾಹುತ ತಪ್ಪಿಸಲು ಪೋಲಿಸ ಇಲಾಖೆಯ ಮೊರೆ ಹೋಗಿದ್ದಾರೆ.

RELATED ARTICLES  ಹೆಗಡೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೆಣ್ಣುಮಕ್ಕಳ ಶಾಲೆಗೆ ಸಮಗ್ರ ಪ್ರಶಸ್ತಿ

ಪೋಲಿಸರು ಸ್ಥಳಕ್ಕೆ ಬಂದು ಮೂವರನ್ನು ಅವರವರವ ಊರಿನ ಬಸ್ ಹತ್ತಿಸಿದ್ದಾರೆ. ಆದರೆ ಇಂದು ಬೆಳಿಗ್ಗೆ ಆಗುತ್ತಿದಂತೆ ಮತ್ತೆ ಪ್ರಕಟವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ ಈಕೆ. ಕೊನೆಗೆ ಪಂಚಾಯತ ಸದಸ್ಯ ವಿನಾಯಕ ನಾಯ್ಕ ಮತ್ತು ಸಾರ್ವಜನಿಕರಾದ ರಾಜು ನಾಯ್ಕ ಸೇರಿದಂತೆ ಹಲವರು ಪೋಲಿಸರ ಗಮನಕ್ಕೆ ತಂದರಾದರೂ, ಕೊನೆಗೆ ಇವಳನ್ನ ಹೊರಹಾಕಲು ಪೋಲಿಸರು ಹರಸಾಹಸ ಪಟ್ಟಿದ್ದು ಮಾತ್ರ ಸುಳ್ಳಲ್ಲ..