ಭಟ್ಕಳ: ಬೈಕ್ ಹಾಗೂ ಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ತಾಲೂಕಿನ ಸಾಗರ ರಸ್ತೆಯ ಅಗ್ನಿಶಾಮಕ ದಳದ ಕಛೇರಿ ಮುಂಬಾಗ ಅಪಾಯಕಾರಿ ತಿರುವಿನಲ್ಲಿ ಈ ಘಟನೆ ನಡೆದಿದೆ.

RELATED ARTICLES  ಹೊನ್ನಾವರದಲ್ಲಿ ನೂತನ ರೈತ ಮೋರ್ಚಾ ಸತ್ಯ-ಮಿಥ್ಯ ಕಾರ್ಯಕ್ರಮ

ಕೊಲ್ಲಾಪುರದದಿಂದ ಭಟ್ಕಳಕ್ಕೆ ಬಂದ ಸರ್ಕಾರಿ ಬಸ್ ಪ್ರಯಾಣಿಕನ್ನು ಬಿಟ್ಟು ಭಟ್ಕಳದ ಸಾಗರ ರಸ್ತೆಯ ಡಿಪ್ಪೋಗೆ ತೆರಳುವ ವೇಳೆ ಇಲ್ಲಿನ ಅಗ್ನಿಶಾಮಕ ದಳದ ಕಛೇರಿ ಮುಂಬಾಗದ ತಿರುವಿನಲ್ಲಿ ಎದುರಿನಿಂದ ಬಂದ ಬೈಕ್ ನಡುವೆ ಅಪಘಾತದ ಸಂಬವಿಸಿದೆ.

RELATED ARTICLES  ಅಧಿಕಾರಿ ಮತ್ತು ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಎಚ್ಚರಿಕೆ

ಘಟನೆಯ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನನ್ನು ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ  ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.