ಕುಮಟಾ : ಮೊಬೈಲ್ ಚಾರ್ಜ್ ಮಾಡುವ ಸಂದರ್ಭದಲ್ಲಿ ಆಕಸ್ಮಿಕ ವಿದ್ಯುತ್ ತಗುಲಿ ಯುವಕ ಮೃತಪಟ್ಟ ಘಟನೆ ತಾಲೂಕಿನ ಊರಕೇರಿಯಲ್ಲಿ ಇಂದು ನಡೆದಿದೆ. ಊರಕೇರಿಯ ತಲಗೋಡ ನಿವಾಸಿ ಜಗದೀಶ ಮಾಸ್ತಿ ಪಟಗಾರ(23) ಮೃತ ವ್ಯಕ್ತಿ ಎಂದು ವರದಿಯಾಗಿದೆ.
ತಾವು ಹೊಸದಾಗಿ ನಿರ್ಮಿಸುತ್ತಿದ್ದ ಮನೆಗೆ ಹಳೆ ಮನೆಯ ವಿದ್ಯುತ್ ಮೀಟರಿನಿಂದ ತಾತ್ಕಾಲಿಕವಾಗಿ ವಯರ್‌ಗಳಿಂದ ವಿದ್ಯುತ್ ಸಂಪರ್ಕ ಮಾಡಿಕೊಂಡಿದ್ದು ಮಧ್ಯಾಹ್ನ ಸ್ನಾನಕ್ಕೆ ಹೋಗುವ ಮುನ್ನ ಜಗದೀಶ ಪಟಗಾರ ಮೊಬೈಲ್ ಚಾರ್ಜ್ ಹಾಕುವ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ ಎನ್ನಲಾಗಿದೆ.ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದು ಮುಂದಿನ ವಿವರ ತಿಳಿದುಬರಬೇಕಿದೆ.