ಶಿರಸಿ: ಉತ್ತರ ಕನ್ನಡದಲ್ಲಿ ಅಕ್ರಮ ಗೋಸಾಗಾಟ ಹಾಗೂ ಗೋಮಾಂಸ ಸಾಗಾಟ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ. ಪೊಲೀಸರಿಗೆ ಹಾಗೂ ಆಡಳಿತ ವರ್ಗದವರಿಗೆ ತಲೆನೋವಾಗಿ ಪರಿಣಮಿಸಿದೆ ಪೊಲೀಸರೂ ಸಹ ಇಂತಹ ಪ್ರಕರಣಗಳನ್ನು ಬೇಧಿಸುತ್ತಿದ್ದು ಮತ್ತೆ ಮತ್ತೆ ಪ್ರಕರಣ ವರದಿಯಾಗುತ್ತಿದೆ. ಇಂತಹುದೇ ಪ್ರಕರಣ ಇಂದು ಸಹ ನಡೆದಿದೆ ಎನ್ನಲಾಗಿದೆ.

ಸುಧೀರ ಸದಾಶಿವ ನಾಯ್ಕ ಕೊಂಡ್ಲಿ ಅವರಿಗೆ ಸೇರಿದ ಕಪ್ಪು ಬಣ್ಣದ ಆಕಳನ್ನು ಅಶೋಕ ಲೈಲೆಂಡ್ ವಾಹನದಲ್ಲಿ ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶದಿಂದ ಕದ್ದೊಯ್ಯುತ್ತಿರುವಾಗ ತಾಲೂಕಿನ ಜಾತಿಕಟ್ಟಾ ಭೂತಪ್ಪ ದೇವಾಲಯದ ಹತ್ತಿರ ಶನಿವಾರ ಬೆಳಗಿನ ಜಾವ ದಾಳಿ ನಡೆಸಿದ ಪೋಲೀಸರು, ನಾಲ್ವರು ಆರೋಪಿಗಳೊಂದಿಗೆ ವಾಹನ ಹಾಗೂ ಆಕಳನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES  ಉತ್ತರ ಕನ್ನಡದಲ್ಲಿ 22 ಜನರಿಗೆ ಕೊರೋನಾ ಪಾಸಿಟಿವ್

ಈ ಸಂಬಂಧವಾಗಿ ಭದ್ರಾವತಿ ನೆಲ್ಲಿಕೆರೆಯ ಸಲ್ಮಾನ ಅಶ್ವಾಖಾನ್, ಭದ್ರಾವತಿ ಕೊಡಮಗೆಯ ಕಾಶೀಪ್ ಮಹಮ್ಮದ್ ರಫಿ, ಭದ್ರಾವತಿ ತರಿಕೆರೆ ರಸ್ತೆಯ ಮುಬಾರಕ್ ಗೌಸ್ ಪೀರ್, ಭದ್ರಾವತಿ ದಡಂಕಟ್ಟೆಯ ಜೈನುಲ್ಲಾ ಶಾಮೀರ ಅವರುಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ಭದ್ರಾವತಿ ಕೊಡಮಗೆಯ ಮಹಮ್ಮದ ವಸೀಂ ಹಾಗೂ ಭದ್ರಾವತಿ ನೆಲ್ಲಿಕೆರೆಯ ಜಮೀರಖಾನ್ ಬಾಬು ಓಡಿಹೋಗಿ ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆಗಾಗಿ ಹುಡುಕಾಡುತ್ತಿದ್ದಾರೆ.

RELATED ARTICLES  ಹೊನ್ನಾವರ ಜನತೆಯ ಕಷ್ಟ ನೀಗಿಸಲು ಸರ್ವ ಪ್ರಯತ್ನ ಮಾಡಿದ್ದೇನೆ: ಶಾರದಾ ಮೋಹನ ಶೆಟ್ಟಿ.