ಯಲ್ಲಾಪುರ : ಕಳೆದ ಏಪ್ರಿಲ್ ತಿಂಗಳಲ್ಲಿ ತಾಲೂಕಿನ ಹಿತ್ತಲ್ಲಿ ಪಂಚಾಯತ ವ್ಯಾಪ್ತಿಯ ಜಾಗರಮನೆ ಎಂಬಲ್ಲಿ ಎರಡು ಮನೆಗಳ ದರೋಡೆ ಪ್ರಕರಣಕ್ಕೆ ಸಂಬಂದಿಸಿದಂತೆ ಇಬ್ಬರು ಅಂತರರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಯಲ್ಲಾಪುರ ಪೊಲೀಸರು ಇಂದು ಯಶಸ್ವಿಯಾಗಿದ್ದಾರೆ.
ಯಲ್ಲಾಪುರ ಪೊಲೀಸರು ಬೆನ್ನು ಹತ್ತಿ ಮಧ್ಯಪ್ರದೇಶ ರಾಜ್ಯಕ್ಕೆ ತೆರಳಿ ಅಲ್ಲಿಯ ಪೊಲೀಸರ ನೆರವಿನೊಂದಿಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ವರ್ಷ ಹಿತ್ತಳ್ಳಿ ಪಂಚಾಯತ ಜಾಗರಮನೆ ಎಂಬಲ್ಲಿ ನಾಗರಾಜ ಗಣೇಶ್ ಹೆಗಡೆ ಮತ್ತು ಗೋಪಾಲ ದೇವೇಂದ್ರ ಹೆಗಡೆ ಎಂಬುವರ ಮನೆಗೆ ನುಗ್ಗಿ ದರೋಡೆ ಮಾಡಿ ಪರಾರಿಯಾದ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆ ಸಂದರ್ಭದಲ್ಲಿ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಅದರಲ್ಲಿ ಮಧ್ಯಪ್ರದೇಶ ರಾಜ್ಯದ ಧಾರ ಜಿಲ್ಲೆಯ ಗೊಡದೋಲಿಯ ಗ್ರಾಮದ ನಿವಾಸಿ ಪ್ರತಾಪ್ ಸಿಂಗ್ ರತನ್ ಸಿಂಗ್ ಮಿನಾವ (28) ಎಂಬಾತನು ಜಾಮೀನಿನ ಮೇಲೆ ಹೊರಬಂದವನು ಪುನಃ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಮತ್ತು ಈ ದರೋಡೆ ಪ್ರಕರಣದ ತಲೆ ಮರೆಸಿಕೊಂಡಿದ್ದ ಮಾಸ್ಟರ್ ಮೈಂಡ್ ಠಾಕೂರ್ ಸಿಂಗ್ ರತನ್ ಸಿಂಗ್ ಮಿನಾವ (26) ಎಂಬಾತನನ್ನು ಹಿಡಿದು ತಂದು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.