ಕಾರವಾರ : ಗೋ ಗಳನ್ನು ಅಕ್ರಮ ಸಾಗಾಟ ಹಾಗೂ ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಿಸುವ ಪ್ರಕರಣ ಒಂದಿಲ್ಲೊಂದುಕಡೆ ವರದಿಯಾಗುತ್ತಿದ್ದರೆ. ಇಂದು ಗೋಸಾಗಾಟ ಮಾಡುವ ಪ್ರಯತ್ನದಲ್ಲಿದ್ದವರನ್ನು ಬಿಜೆಪಿ ಕಾರ್ಯಕರ್ತರು ತಡೆದ ಘಟನೆ ವರದಿಯಾಗಿದೆ.
ತಾಲೂಕಿನ ಕಿನ್ನರದ ಅಂಬೇಜೂಗ್ ಸಿದ್ದಾವಾಡದಲ್ಲಿ ಟಾಟಾ ಏಸ್ ವಾಹನದಲ್ಲಿ ಆಕಳುಗಳನ್ನು ಸಾಗಿಸಲು ಮುಂದಾದ ವ್ಯಕ್ತಿಯನ್ನು ತಡೆದ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಗೋವುಗಳ ಅಕ್ರಮ ಸಾಗಾಟ ತಡೆದಿದ್ದಾರೆ. ಟಾಟಾ ಏಸ್ ವಾಹನದಲ್ಲಿ ಕಿನ್ನರದ ಅಂಬೇಜೂಗ್ ಸಿದ್ದಾವಾಡಕ್ಕೆ ಆಗಮಿಸಿ ಆಕಳನ್ನು ತುಂಬಿಕೊಂಡು ಹೋಗಲು ಮುಂದಾದಾಗ ಅವರನ್ನು ತಡೆದ ಸ್ಥಳೀಯ ಬಿಜೆಪಿ ಕಾರ್ಯಕರ್ತರಾದ ಗುರುನಾಥ ನಾಗೇಕರ, ಕೃಷ್ಣಾನಂದ ತಳೇಕರ, ಹರೀಶಚಂದ್ರ ನಾಗೇಕರ, ಮಂಜು ನಾಗೇಕರ, ಸೂರಜ್ ಕೋಠಾರಕರ, ಪ್ರದೀಪ ನಾಯ್ಕ ಎನ್ನುವವರು ಗೋವುಗಳನ್ನು ಸಾಗಿಸಲು ಪಂಚಾಯಿತಿ ಇಂದ ಅಥವಾ ಪಶು ವೈದ್ಯರಿಂದ ಅನುಮತಿ ಪತ್ರ ತೋರಿಸುವಂತೆ ವಿಚಾರಿಸಿದ್ದಾರೆ.
ಆದರೆ ಗೋವು ಸಾಗಾಟಕ್ಕೆ ಮುಂದಾದ ವ್ಯಕ್ತಿಯ ಬಳಿ ಯಾವುದೇ ಅನುಮತಿ ಪತ್ರ ಇರಲಿಲ್ಲ. ಹೀಗಾಗಿ ಆ ವ್ಯಕ್ತಿ ಗೋವುಗಳನ್ನು ಬಿಟ್ಟು ವಾಪಸ್ಸಾದರು ಎನ್ನಲಾಗಿದೆ. ಗೋವುಗಳ ಸಾಗಾಟಕ್ಕೆ ಅಧಿಕೃತ ಪ್ರಮಾಣ ಪತ್ರ ಅಗತ್ಯ ಪ್ರಮಾಣಪತ್ರ ಇರಬೇಕಾಗಿತ್ತು, ಗೂಗಲ ಸಾಗಾಟಕ್ಕೆ ಮುಂತಾದವರಲ್ಲಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಗೋವನ್ನು ಅಕ್ರಮವಾಗಿ ಸಾಗಿಸಲು ಪ್ರಯತ್ನ ನಡೆದಿತ್ತೋ ಅಥವಾ ಇನ್ಯಾವ ಕಾರಣಕ್ಕೆ ಎಂಬುದರ ಬಗ್ಗೆ ಪೂರ್ಣ ಮಾಹಿತಿ ತಿಳಿದು ಬರಬೇಕಿದೆ.