ಭಟ್ಕಳ: ಮೀನುಗಾರಿಕೆ ಹಾಗೂ ಸಮುದ್ರದಲ್ಲಿ ನಡೆಸುವ ಇನ್ನಿತರ ಕಾರ್ಯಗಳು ಜನರ ಜೀವವನ್ನೇ ಅಪಾಯಕ್ಕೆ ಒಡ್ಡಿಬಿಡುತ್ತದೆ. ಮೀನುಗಾರಿಕೆಗೆ ತೆರಳುವ ಅವರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ತಮ್ಮ ಕಾರ್ಯ ಮಾಡುತ್ತಾರೆ. ಜೀವನಕ್ಕಾಗಿ ತಮ್ಮ ವೃತ್ತಿಯನ್ನು ನಂಬಿಕೊಂಡಿರುವವರು ಅಂತಹ ಕಷ್ಟದ ಸಂದರ್ಭಗಳನ್ನು ಎದುರಿಸುತ್ತಾರೆ. ಆದರೆ ಇಂತಹ ಸಂದರ್ಭಗಳಲ್ಲಿ ಅವಘಡಗಳು ಸಂಭವಿಸಿದರೆ ಅವರ ಪರಿಸ್ಥಿತಿ ಹೇಳತೀರದು. ಇಂತಹದೇ ಒಂದು ಘಟನೆ ವರದಿಯಾಗಿದೆ.

RELATED ARTICLES  ಅಭೂತಪೂರ್ವ ಯಶಸ್ಸು ಕಂಡ "ಸಾಗುತಿರಲಿ ಬಾಳ ಬಂಡಿ" ಕಾರ್ಯಕ್ರಮ : ಸತ್ವಾಧಾರ ಫೌಂಡೇಶನ್ ಕಾರ್ಯದ ಬಗ್ಗೆ ಮೆಚ್ಚುಗೆ.

ಮೀನುಗಾರಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಸಮುದ್ರದಲ್ಲಿ ಬಿದ್ದು ನಾಪತ್ತೆಯಾಗಿರುವ ಬಗ್ಗೆ ಭಟ್ಕಳದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿಯ ಮನೆಯವರು ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ ವ್ಯಕ್ತಿಯ ಕಣ್ಮರೆಯಿಂದ ಆತಂಕಗೊಂಡಿದ್ದಾರೆ.

ಸಮುದ್ರದಲ್ಲಿ ಬಿದ್ದು ನಾಪತ್ತೆಯಾದ ವ್ಯಕ್ತಿಯನ್ನು ಕುಮಟಾ ಮೂಲದ ದಿವಗಿ ನಿವಾಸಿ ಗಂಗಾಧರ ಅಂಬಿಗ ಎಂದು ಗುರುತಿಸಲಾಗಿದೆ. ಹರಿ ಓಂ ಬೋಟ್ ನಲ್ಲಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ನಾಪತ್ತೆಯಾದ ವ್ಯಕ್ತಿಯ ಭಾವ ಸಂತೋಷ ಅಂಬಿಗ ಭಟ್ಕಳದ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ತನಿಖೆಯ ನಂತರದಲ್ಲಿ ಈ ಬಗ್ಗೆ ಪೂರ್ಣ ಮಾಹಿತಿ ತಿಳಿದು ಬರಬೇಕಿದೆ.

RELATED ARTICLES  ಶಿರಸಿ ಜಿಲ್ಲಾ ಬಂದ್ : ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗಿ