ಸಿದ್ದಾಪುರ: ಕಳೆದ ಕೆಲವು ದಿನದ ಹಿಂದೆಯಷ್ಟೇ ಉತ್ತರ ಕನ್ನಡವನ್ನು ಬೆಚ್ಚಿ ಬೀಳಿಸಿದ್ದ ಗುಂಡು ಹಾರಿಸಿ ಇಬ್ಬರ ಕೊಲೆಯ ಪ್ರಕರಣ ಹಸಿಯಾಗಿರುವಂತೆಯೇ, ಇಂದು ಅಕ್ರಮವಾಗಿ ಇಟ್ಟುಕೊಂಡಿದ್ದ ನಾಡ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.

ಖಚಿತ ಮಾಹಿತಿ ಮೇರೆಗೆ ಕುಡೆಗೋಡ್ ಗ್ರಾಮದಲ್ಲಿ ದಾಳಿ ನಡೆಸಿದ‌ ಪೊಲೀಸರು ಅಕ್ರಮ ನಾಡ ಬಂದೂಕನ್ನು ವಶಪಡಿಸಿಕೊಂಡು
ತನ್ನ ಮನೆಯ ಪಕ್ಕದಲ್ಲಿ ಕಟ್ಟಿಗೆ ಶೇಖರಿಸಿಡಲು ಮಾಡಿರುವ ಶೆಡ್ಡಿನಲ್ಲಿ ಇಟ್ಟುಕೊಂಡಿದ್ದ ಬಂದೂಕಿನ ಜೊತೆಗೆ ಬಲವಿoದ್ರ ತಿಮ್ಮ ಹಸ್ಲರ್ ಇವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

RELATED ARTICLES  ಹಿಂದುತ್ವಕ್ಕಾಗಿ ಬಲಿದಾನಗೈದವರಿಗೆ ನ್ಯಾಯ ಒದಗಿಸಲು ಮಂಗಳೂರು ಚಲೋ ಜನ ಸುರಕ್ಷ ಯಾತ್ರೆ ; ಪ್ರಮೋದ ಹೆಗಡೆ

24 ವರ್ಷದ ಕೂಲಿ ಕೆಲಸ ಮಾಡುತ್ತಿರುವ ಆರೋಪಿತನಾದ ಬಲವಿಂದ್ರ ಹಸ್ಲರ ,‌ ನಾಡ ಬಂದೂಕನ್ನು ಯಾವುದೇ ಅಧಿಕೃತ ಪರವಾನಗೆ ಇಲ್ಲದೆ ಅನಧಿಕೃತವಾಗಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ವೇಳೆ ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತಪ್ಪ ಜಿ ಕುಂಬಾರ ರವರು ಸಿಬ್ಬಂದಿ ಅವರೊಂದಿಗೆ ದಾಳಿಮಾಡಿ ಒಂಟಿ ನಳಿಕೆಯ ನಾಡ ಬಂದೂಕಿನೊಂದಿಗೆ ಆರೋಪಿತರನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

RELATED ARTICLES  ಗೌಪ್ಯವಾಗಿ ಬಳಕೆಯಾಗುತ್ತಿದ್ದ ಪ್ಲಾಸ್ಟಿಕ್: ಅಂಗಡಿಗಳ ಮೇಲೆ ನಡೀತು ದಾಳಿ