ಕುಮಟಾ: ಜಿಲ್ಲಾ ಪಂಚಾಯತ ನಿಕಟಪೂರ್ವ ಸದಸ್ಯರೂ ಹಾಗೂ ಕಾಂಗ್ರೆಸ್ ಮುಖಂಡ ರತ್ನಾಕರ ನಾಯ್ಕ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮತ್ತು ಮಾಜಿ ಎಂಎಲ್‌ಸಿ ಎಂ ಡಿ ಲಕ್ಷ್ಮೀನಾರಾಯಣ ಅವರು ರತ್ನಾಕರ ನಾಯ್ಕ ಅವರನ್ನು ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಿ, ಆದೇಶ ಪತ್ರ ನೀಡಿದ್ದಾರೆ. ಎಂದಿನoತೆ ಪಕ್ಷ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ಸಬಲೀಕರಣ, ಸಂಘಟನೆ , ಬಲ ವರ್ಧನೆ ಕಾರ್ಯದಲ್ಲಿ ಸಮರ್ಪಣಾ ಭಾವದಿಂದ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ.

RELATED ARTICLES  ಸಂಪನ್ನವಾಯ್ತು ಕುಮಟಾ ಅರ್ಬನ್ ಬ್ಯಾಂಕ್ ಶತಮಾನೋತ್ಸವ

ಈ ದಿಶೆಯಲ್ಲಿ ಪಕ್ಷ ಸಂಘಟನೆ ಕಾರ್ಯದಲ್ಲಿ ಹೆಚ್ಚಿನ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ. ಕಾಂಗ್ರೆಸ್‌ನ ರಾಜ್ಯ ಸಮಿತಿಯಲ್ಲಿ ಗೌರವಯುತ ಸ್ಥಾನ ನೀಡಿದ ಪಕ್ಷದ ವರಿಷ್ಠರಿಗೆಲ್ಲರಿಗೂ ರತ್ನಾಕರ ನಾಯ್ಕ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಬಗ್ಗೆ ರತ್ನಾಕರ ನಾಯ್ಕ ಸಂತಸ ಹಂಚಿಕೊಂಡಿದ್ದಾರೆ. ಅವರ ಅಭಿಮಾನಿಗಳು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES  ಹೊಲನಗದ್ದೆಯಲ್ಲಿ ಶಾಲಾ ಪ್ರಾರಂಭೋತ್ಸವ