ಕುಮಟಾ : ಸ್ಕೂಟಿ ಹಾಗೂ ಮಿನಿ ಟ್ರಕ್ ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಸವಾರನ ಕಾಲಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಕುಮಟಾ ತಾಲೂಕಿನಿಂದ ವರದಿಯಾಗಿದೆ. ತಾಲೂಕಿನ ಹೊಸಕಟ್ಟಾ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಗಾಯಗೊಂಡವನನ್ನು ಗೋಕರ್ಣದ ಚಿನ್ನದ ಕೇರಿ ನಿವಾಸಿ ಪಾಂಡುರಂಗ ಭಟ್ಟ ಎಂದು ಗುರುತಿಸಲಾಗಿದೆ. ಇವರು ಕುಮಟಾದಿಂದ ಗೋಕರ್ಣ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಮಿನಿ ಟ್ರಕ್ ನ ಹಿಂದಿನ ಚಕ್ರಕ್ಕೆ ಸ್ಕೂಟಿ ಸಿಲುಕಿದ್ದು ಪ್ರಾಣಾಪಾಯದಿಂದ ಪಾರಾಗಿರುವುದು ದೇವರ ದಯೆ ಎಂಬಂತೆ ಪ್ರತ್ಯಕ್ಷದರ್ಶಿಗಳು ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಅಪಘಾತದಿಂದಾಗಿ ವ್ಯಕ್ತಿಯ ಕಾಲಿಗೆ ಪೆಟ್ಟು ಬಿದ್ದಿದ್ದು ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಖಾಸಗಿ ಅಂಬುಲೆನ್ಸ್ ಮೂಲಕ ಅಪಘಾತಗೊಂಡ ವ್ಯಕ್ತಿಯನ್ನು ಗೋಕರ್ಣ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಗ್ಗೆ ಪ್ರಕರಣ ದಾಖಲಾಗಿದೆ.