ಕ್ಷೇಮ ಹೆಲ್ತ್ ಕಾರ್ಡ್ ನೋಂದಣಿ ಶಿಬಿರ ಯಶಸ್ವಿ

ಕುಮಟಾ : ಇತ್ತೀಚಿಗೆ ಪ್ರಗತಿ ವಿದ್ಯಾಲಯ ಮೂರೂರು ಕಲ್ಲಬ್ಬೆ ಇಲ್ಲಿ ಜಸ್ಟೀಸ್ ಕೇ.ಎಸ್. ಹೆಗಡೆ ಚಾರಿಟೇಬಲ್ ಆಸ್ಪತ್ರೆ, ಮತ್ತು ಗ್ರಾಮೀಣ ವ್ಯವಸಾಯ ಸೇವಾ ಸಂಘ ಮೂರೂರು, ಮೂರೂರು ಕಲ್ಲಬ್ಬೆ ವಲಯ ಹಾಗೂ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇವರ ಆಶ್ರಯದಲ್ಲಿ ಕ್ಷೇಮ ಹೆಲ್ತ್ ಕಾರ್ಡ್ ನೋಂದಣಿ ಶಿಬಿರ ಯಶಸ್ವಿಯಾಗಿ ನಡೆಯಿತು.

ಕೆ ಎಸ್ ಹೆಗಡೆ ಆಸ್ಪತ್ರೆಯ ಪ್ರತಿನಿಧಿಗಳಾದ ಶ್ರೀ ಜೈ ಸನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಸ್ಪತ್ರೆಯಲ್ಲಿರುವ ವಿವಿಧ ಸೌಲಭ್ಯಗಳು, ಆರೋಗ್ಯ ವಿಮೆಯ ಪ್ರಯೋಜನಗಳು ಇತ್ಯಾದಿಗಳ ಬಗ್ಗೆ ವಿವರವಾಗಿ ತಿಳಿಸುತ್ತಾ ಕ್ಷೇಮ ಹೆಲ್ತ್ ಕಾರ್ಡನ ಕೌಂಟರ್ ಅನ್ನು ಕುಮಟಾದಲ್ಲಿ ತೆರೆಯುವ ಯೋಜನೆ ಇದೆ ನಿಮ್ಮೆಲ್ಲರ ಸಂಪೂರ್ಣ ಸಹಕಾರ ಬೇಕು ಎಂದರು. ಶ್ರೀ ಅಖಿಲ ಹವ್ಯಕ ಮಹಾಸಭಾ ದ ನಿರ್ದೇಶಕರು ಶ್ರೀ ಅರುಣ ಹೆಗಡೆಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶರೀರ-ಮನಸ್ಸು ಸದೃಢ ಆಗಿದ್ದಾಗ ಮಾತ್ರ ಅದನ್ನು ಆರೋಗ್ಯ ಎಂದು ಕರೆಯುತ್ತೇವೆ. ಶಿಬಿರದ ಉದ್ದೇಶವನ್ನು ವಿವರಿಸುತ್ತ ಈ ಭಾಗದ ಜನರು ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

RELATED ARTICLES  ಉತ್ತರ ಕನ್ನಡಿಗರಿಗೆ ಗುಡ್ ನ್ಯೂಸ್..!

ವಿದ್ಯಾನಿಕೇತನದ ಅಧ್ಯಕ್ಷರಾದ ಶ್ರೀ ಆರ್ ಜಿ ಭಟ್ರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ವ್ಯವಸ್ಥಾ ಪರಿಷತ್ತಿನ ಉಪಾಧ್ಯಕ್ಷರಾದ ಶ್ರೀ ಸುಬ್ರಾಯ ಭಟ್ ರವರು ಅನಾರೋಗ್ಯ ಉಂಟಾದಾಗ ಅರೋಗ್ಯವಿಮೆಯ ಬಗ್ಗೆ ಲಕ್ಷ್ಯ ವಹಿಸುವುದಕ್ಕಿಂತ ಮುಂದಾಲೋಚನೆಯಿಂದ ಹೆಲ್ತ್ ಕಾರ್ಡನ್ನು ಮಾಡಿಕೊಂಡರೆ ಪ್ರಯೋಜನವಾದೀತು ಎಂದರು. ಮೂರೂರು ವಲಯದ ಯೋಗಕ್ಷೇಮ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಎಸ್. ವಿ. ಭಟ್ ರವರು ತಮ್ಮ ವೃತ್ತಿ ಅನುಭವಗಳನ್ನು ಹೇಳುತ್ತಾ ಹೆಲ್ತ್ ಕಾರ್ಡ್ ಮಾಡಿಕೊಳ್ಳುವ ಅಗತ್ಯತೆಯ ಬಗ್ಗೆ ವಿವರಿಸಿದರು. ವೇದಿಕೆಯ ಮೇಲೆ ಶ್ರೀರಾಮಚಂದ್ರಾಪುರ ಮಠ ಹೊಸನಗರ ಸೇವಾ ಖಂಡದ ಯೋಗಕ್ಷೇಮ ವಿಭಾಗದ ಶ್ರೀ ಸತೀಶ್ ಭಟ್, ಆಸ್ಪತ್ರೆಯ ಪ್ರತಿನಿಧಿಗಳಾದ ಶ್ರೀ ಅಕ್ಷಯ್, ಉಪಸ್ಥಿತರಿದ್ದರು.

RELATED ARTICLES  ಗ್ರಾಮಕ್ಕೆ ಬಂದ ಆನೆ : ಜನತೆ ಕಂಗಾಲು

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷರೂ ಕುಮಟ ಮಂಡಲದ ಅಧ್ಯಕ್ಷರು ಆಗಿರುವಂತಹ ಶ್ರೀ ಜಿಎಸ್ ಹೆಗಡೆಯವರು ಈ ಭಾಗದಲ್ಲಿ ಹೆಲ್ತ್ ಕಾರ್ಡ್ ಶಿಬಿರ ಮತ್ತು ಮುಂದಿನ ದಿನಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿ ಊರಿನ ಜನಸಾಮಾನ್ಯರಿಗೂ ಉತ್ತಮ ಚಿಕಿತ್ಸೆ ಲಭ್ಯವಾಗುವ ರೀತಿಯಲ್ಲಿ ಪ್ರಯತ್ನಿಸೋಣ ಎಂದರು. ಮೂರೂರು ಕಲ್ಲಬ್ಬೆ ವಲಯದ ಅಧ್ಯಕ್ಷರಾದ ಶ್ರೀ ಎಸ್ ವಿ ಹೆಗಡೆಯವರು ಆಗಮಿಸಿದ ಸರ್ವರನ್ನು ಸ್ವಾಗತಿಸಿದರು. ಶ್ರೀ ರಾಘವೇಂದ್ರ ಹೆಗಡೆ ಕಲ್ಲಬ್ಬೆ ಅವರು ಕಾರ್ಯಕ್ರಮ ನಿರೂಪಿಸಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.