ಕೊರೋನಾ ಮಹಾಮಾರಿಯಿಂದ ಮುಚ್ಚಲಾಗಿದ್ದ ಶಾಲೆಗಳ ಆರಂಭ ಕ್ರಮವಾಗಿ ನಡೆಯುತ್ತಿದ್ದು ಇದೀಗ ಅಕ್ಟೋಬರ್ 25ರಿಂದ 1ರಿಂದ 5ನೇ ತರಗತಿ ಶಾಲೆ ಆರಂಭ ಆಗಲಿದೆ. 

ರಾಜ್ಯದಲ್ಲಿ ಕೊರೋನಾ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದ್ದರಿಂದ ಶಾಲೆ ಆರಂಭಿಸುವುದಕ್ಕೆ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. 

ಇನ್ನು ಶಾಲೆಗಳ ಆರಂಭ ಕುರಿತಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಅದರಂತೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಅನುಮತಿ ಕಡ್ಡಾಯ. ಮಕ್ಕಳಿಗೆ ಶಾಲೆ ಹಾಜರಾತಿ ಕಡ್ಡಾಯವಿಲ್ಲ. ಶಿಕ್ಷಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು. ಸದ್ಯಕ್ಕೆ ತರಗತಿಯಲ್ಲಿ ಶೇಕಡ 50ರಷ್ಟು ಮಕ್ಕಳಿಗೆ ಮಾತ್ರ ಅವಕಾಶ.. ತರಗತಿಯಲ್ಲಿ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಫೇಸ್ ಶೀಲ್ಡ್ ಕಡ್ಡಾಯ. ಅರ್ಧ ದಿನ ಮಾತ್ರ ತರಗತಿ ನಡೆಸಲಾಗುತ್ತದೆ.  

RELATED ARTICLES  ಗೋ ಸಂರಕ್ಷಕರ ಮೇಲೆ ಹಲ್ಲೆ ಖಂಡಿಸಿದ ಭಾರತೀಯ ಗೋ ಪರಿವಾರ

ಕಳೆದ ಸೆಪ್ಟೆಂಬರ್ 23ರಿಂದ 9ರಿಂದ 12ನೇ ತರಗತಿ ಹಾಗೂ ಅಕ್ಟೋಬರ್ 6ರಿಂದ 6ರಿಂದ 8ನೇ ತರಗತಿ ಶಾಲೆಗಳನ್ನು ರಾಜ್ಯ ಸರ್ಕಾರ ಆರಂಭ ಮಾಡಿತ್ತು.

ಮಾರ್ಗಸೂಚಿಯಲ್ಲಿ ಏನಿದೆ?
– ಶೇ.50 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
– ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕು
– ತರಗತಿಯಲ್ಲಿ 1 ಮೀಟರ್ ಅಂತರದಲ್ಲಿ ಕೂರಬೇಕು. ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಬಳಕೆ ಮಾಡಬೇಕು.
– ಪೋಷಕರ ಅನುಮತಿ ಪಡೆದು ಮಕ್ಕಳು ತರಗತಿಗೆ ಬರಬಹುದು
– ಪ್ರವೇಶ ದ್ವಾರಗಳಲ್ಲಿ ಸೇರದಂತೆ ಶಾಲೆಯ ಒಳಗೆ, ಆವರಣದಲ್ಲಿ, ತರಗತಿಗಳ ಒಳಗೆ ಗುಂಪುಗೂಡುವಂತಿಲ್ಲ.
– ಶಿಕ್ಷಕರು, ಸ್ಟಾಫ್ ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು.
– ಎರಡು ಡೋಸ್ ಪೂರ್ಣ ಮಾಡಿರುವ ಶಿಕ್ಷಕರು, ಸ್ಟಾಫ್ ಗೆ ಮಾತ್ರ 1-5 ತರಗತಿಗಳೊಳಗೆ ಪ್ರವೇಶ.

RELATED ARTICLES  2019 ಹಾಗೂ 2020 ನೇ ಸಾಲಿನ ಹವ್ಯಕ ವಿಶೇಷ ಪ್ರಶಸ್ತಿಗಳ ಪಟ್ಟಿ ಪ್ರಕಟ