ಹೊನ್ನಾವರ : ಹೊನ್ನಾವರದ ಜನತೆಗೆ ಪರಮಾಪ್ತರಂತೆ ಇದ್ದ, ಜನತೆಯ ಕಷ್ಟಕ್ಕೆ ಸದಾ ಸ್ಪಂದಿಸುತ್ತಾ ಜನತೆಗೆ ಒಂದಾಗಿ ಉತ್ತಮ ನಾಯಕರಾಗಿ ಕಳಿಸಿದ್ದ, ಬಿಜೆಪಿಯ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಶಾಸಕ ಎಂ.ಪಿ.ಇ ಸೊಸೈಟಿಯ ಅಧ್ಯಕ್ಷ ಡಾ. ಎಂ.ಪಿ ಕರ್ಕಿ ಇಹಲೋಕ ತ್ಯಜಿಸಿದ್ದಾರೆ. ಬಡವರ ಡಾಕ್ಟರ್ ಎಂದೆ ಪ್ರಸಿದ್ಧಿ ಪಡೆದ ಇವರು ವೈದ್ಯವೃತ್ತಿಯನ್ನು ಅತ್ಯಂತ ಪ್ರೀತಿಯಿಂದ ಹಾಗೂ ಸಾರ್ವಜನಿಕ ಸೇವೆಗೋಸ್ಕರ ನಡೆಸಿದ್ದನ್ನು ಹೊನ್ನಾವರದ ಜನತೆ ಸ್ಮರಿಸಿಕೊಳ್ಳುತ್ತಾರೆ.
ವಯೋಸಹಜ ಕಾಯೆಯಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
ಜನಸಂಘದ ಕಾಲದಿಂದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾಗಿ ಪಕ್ಷದ ಅತ್ಯಂತ ಕಷ್ಟ ಕಾಲದಲ್ಲಿ 18 ವರ್ಷಗಳ ವರೆಗೆ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾಗಿದ್ದರು. ಒಮ್ಮೆ ರಾಜ್ಯ ಕಾರ್ಯದರ್ಶಿಯಾಗಿ 1983ಹಾಗೂ ಎರಡನೇ ಬಾರಿ 1994ರಲ್ಲಿ ಎರಡು ಬಾರು ಕುಮಟಾ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ, ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಷ್ಟಿತ ಸಂಸ್ಥೆ ಯಾದಂತ ಶ್ರೀ ಧರ್ಮಸ್ಥಳ ಮಂಜುನಾಥೆಶ್ವರದ 40 ವರ್ಷಗಳ ವರೆಗೆ ಸೇವೆ ಸಲ್ಲಿಸಿರುವ ಡಾ. ಎಂ.ಪಿ ಕರ್ಕಿ(87) ಇಂದು ನಮ್ಮನ್ನೆಲ್ಲ ಅಗಲಿದ್ದಾರೆ, ಶ್ರೀಯುತರು ಪತ್ನಿ, ಪುತ್ರಿ, ಪುತ್ರ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಶಾಸಕರಾಗಿ ಹೊನ್ನಾವರದ ಜನರಿಗಾಗಿ ಧ್ವನಿ ಎತ್ತಿದ್ದ ಹಾಗೂ ಜನರಿಗಾಗಿ ಉಪಕಾರಿ ಕಾರ್ಯಗಳಲ್ಲಿ ಸದಾ ಮುಂದಿರುತ್ತಿದ್ದ ಹಿರಿಯರಾದ ಎಂ.ಪಿ ಕರ್ಕಿ ಅವರ ಬಗ್ಗೆ ಜನತೆಗೆ ಸದಾ ಗೌರವದ ಭಾವನೆ ಇತ್ತು. ಹೊನ್ನಾವರದಲ್ಲಿ ನಡೆಯುವ ಎಲ್ಲಾ ಸತ್ಕಾರ್ಯಗಳಲ್ಲಿ ಸಂಘಟಕರ ಜೊತೆಗೆ ನಿಲ್ಲುತ್ತಿದ್ದ ಇವರು ಹವ್ಯಕ ಸಮಾಜದ ಮುಖಂಡರು ಗುರುತಿಸಿಕೊಂಡಿದ್ದರು.
ಸುಪ್ರಸಿದ್ದ ನ್ಯಾಯವಾದಿ, ಸ್ವಾತಂತ್ರ್ಯ ಹೋರಾಟಗಾರರಾದ ಪರಮೆಶ್ವರ ಗಣೇಶ ಕರ್ಕಿ ಹಾಗು ಶ್ರೀಮತಿ ಅನುಸೂಯ ಇವರ ಮಗನಾಗಿ 16/07/1935 ರಲ್ಲಿ ಜನಿಸಿದ ಎಂ.ಪಿ ಕರ್ಕಿ ಅವರು, ಮುಂಬಯಿನ ಪ್ರಸಿದ್ಧ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪಡೆದವರು. ಗ್ರಾಮೀಣ ಭಾಗದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದರು.
ಇವರು ಬಡವರ ಡಾಕ್ಟರ್ ಎಂದೇ ಪ್ರಸಿದ್ದರಾದ ಇವರು ,ಅನೇಕ ಸಹಕಾರಿ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು. ಜನಸಂಘದ ಸಕ್ರಿಯ ಕಾರ್ಯಕರ್ತರಾಗಿ, ಎರಡು ಬಾರಿ ಶಾಸಕರಾಗಿ ರಸ್ತೆಗಳ ನಿರ್ಮಾಣ, ಶಾಲೆ-ಕಾಲೇಜುಗಳ ನಿರ್ಮಾಣ, ರೈತರಿಗೆ-ಮೀನುಗಾರರಿಗೆ ಮನೆಯ ಹಕ್ಕುಪತ್ರ ಕೊಡಿಸುವುದು ಹಾಗೂ ಕುಡಿಯುವ ನೀರನ್ನು ಒದಗಿಸಿ ಜನಸೇವೆಯಲ್ಲಿ ತೊಡಗಿಸಿಕೊಂಡರು.ಎಂ.ಪಿ. ಸೊಸೈಟಿಯ ಅಧ್ಯಕ್ಷರಾಗಿ ಶೈಕ್ಷಣಿಕ ಹಾಗೂ ಸೇವಾ ಕ್ಷೇತ್ರದಲ್ಲಿ ಇವರು ಕಾಯಕಯೋಗಿಯಂತೆ ಗುರುತಿಸಿಕೊಂಡಿದ್ದರು. ತಮ್ಮ ಇಳಿವಯಸ್ಸಿನಲ್ಲಿಯೂ ಸಾಮಾಜಿಕ ಚಟುವಟಿಕೆ ಹಾಗೂ ಜನತೆಯ ಕಾರ್ಯಗಳಲ್ಲಿ ಒಂದಾಗಿ ಬರುತ್ತಿದ್ದ ಇವರ ಚೈತನ್ಯವನ್ನು ಜನತೆ ಎಂದಿಗೂ ಮರೆಯುವಂತಿಲ್ಲ.