ಗೋಕರ್ಣ : ಸಮುದ್ರಕ್ಕಿಳಿದು ನಾಪತ್ತೆಯಾಗಿದ್ದ ಪ್ರವಾಸಿಗನ ಶವ ಗೋಕರ್ಣ ಸಮೀಪದ ಬಾವಿಕೊಡ್ಡ ಕಡಲ ತೀರದಲ್ಲಿ ಇಂದು ಸಂಜೆ ಪತ್ತೆಯಾಗಿದೆ. ಬೆಂಗಳೂರು ಮೂಲದ 23 ವರ್ಷದ ರವಿನಂದನ ಗೆಳೆಯರ ಜತೆ ಗೋಕರ್ಣದ ರುದ್ರಪಾದ ಸಮುದ್ರದಲ್ಲಿ ಈಜುತ್ತಿರುವಾಗ ನೀರಿನ ಸುಳಿಗೆ ಸಿಕ್ಕಿ ನಾಪತ್ತೆಯಾಗಿದ್ದ.
ಆತನ ಪತ್ತೆಗಾಗಿ ಗೋಕರ್ಣ ಪೊಲೀಸರು, ಕರಾವಳಿ ಕಾವಲು ಪಡೆಯ ಪೊಲೀಸರು ತೀವ್ರ ಕಾರ್ಯಾರಚಣೆ ನಡೆಸಿದ್ದು, ಸೋಮವಾರ ಮಧ್ಯಾಹ್ನ ಮೃತದೇಹ ಬಾವಿಕೊಡ್ಲದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಈತ ಬೆಂಗಳೂರಿನಲ್ಲಿ ಸಿ.ಎ ಓದುತ್ತಿದ್ದ ಎನ್ನಲಾಗಿದ್ದು, ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.