ಹೊನ್ನಾವರ : ಮಹಾತ್ಮಾ ಗಾಂಧಿ ನರೇಗಾ ಯೋಜನೆ ಸಮಾಜದಲ್ಲಿ ನಿರ್ಗತಿಕರು ಅಸಹಾಯಕರಿಗೆ ಆಶಾದೀಪವಾಗಿದೆ. ಸಾಮಾಜಿಕ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಉದ್ಯೋಗ ಖಾತ್ರಿ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದು, ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಯುವ ಸಾಮಾಜಿಕ ಪರಿಶೋಧನೆ ಯೋಜನೆಯಲ್ಲಿನ ಫಲಾನುಭವಿಗಳಿಗೆ ಕೂಲಿಕಾರರಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಒಂದು ವರದಾನವಿದ್ದಂತೆ. ಕೂಲಿ ವಿಳಂಭವಾದ ಬಗ್ಗೆ ಇಲ್ಲಿ ಅಹವಾಲಿಗೆ ಅವಕಾಶವಿದೆ. ಯೋಜನೆ ಆರ್ಥಿಕ ಬದಲಾವಣೆ ಜೊತೆಗೆ ಜನರ ಮಾನಸಿಕ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸಿದೆ. ಎಂದು ತಾಲೂಕಾ ಸಾಮಾಜಿಕ ಪರಿಶೋಧನಾ ಸಂಯೋಜಕ ಉಮೇಶ ಮುಂಡಳ್ಳಿ ಹೇಳಿದರು. ಅವರು ಇತ್ತೀಚೆಗೆ ತಾಲೂಕಿನ ಮಂಕಿ ಗ್ರಾಮ ಪಂಚಾಯತನಲ್ಲಿ ನಡೆದ 2017-18ನೇ ಸಾಲಿನ ಮೊದಲ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

RELATED ARTICLES  ವಿಜಯ ಪ್ರಕಾಶ ಹಾಡಿಗೆ ಅಂಕೋಲಿಗರು ಫೀಧಾ..!

ಸಾಮಾಜಿಕ ಪರಿಶೋಧನೆ ಗ್ರಾಮ ಪಂಚಾಯತ ಸಿಬ್ಬಂಧಿಗಳ ಕರ್ತವ್ಯ ಮತ್ತು ಕಡತ ನಿರ್ವಹಣೆಯಲ್ಲಿ ಸಾಕಷ್ಟು ಮಾಹಿತಿ ನೀಡುತ್ತಿದೆ. ಇದರಿಂದ ನಿರ್ವಹಣೆಯಲ್ಲಿ ನ್ಯೂನ್ಯತೆಯ ಪ್ರಮಾಣ ಇಳಿಮುಖವಾಗುತ್ತಿದೆ. ಯೋಜನೆಯ ನಿಯಮದಂತೆ ಕೆಲಸ ನಿರ್ವಹಿಸಿದ್ದಲ್ಲಿ ಸಾಕಷ್ಟು ಜನರಿಗೆ ಕೆಲಸ ನೀಡಲು ಸಾಧ್ಯ. ಸಾಮಾಜಿಕ ಪರಿಶೋಧನೆಯು ಜನರಿಗೆ ಪೂರಕವಾಗಿದ್ದು ಈ ಬಗ್ಗೇ ಇತ್ತೀಚಿನ ದಿನಗಳಲ್ಲಿ ಜನರಿಗೆ ಅರಿವು ಮೂಡುತ್ತಿರುವ ಒಂದು ಉತ್ತಮ ಬೆಳವಣಿಗೆ ಎಂದರು.
ಗ್ರಾಮಮಟ್ಟದಲ್ಲಿ ನಡೆಯುತ್ತಿರುವ ಹಲವು ಯೋಜನೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳುವ ಬಗ್ಗೆ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸುರೇಶ ನಾಯ್ಕ ತಿಳಿಸಿದರು.
ಪಂಚಾಯತ ಅಧ್ಯಕ್ಷ ಸತೀಶ ನಾಯ್ಕ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಜನರಿಗೆ ಯೋಜನೆ ಬಗ್ಗೆ ಹೆಚ್ಚಿನ ಪ್ರಯೋಜನ ಪಡೆಯುವಂತೆ ಸಹಕರಿಸುವುದಾಗಿ ತಿಳಿಸಿದರು. ನಂತರ ಗ್ರಾಮ ಸಂಪನ್ಮೂಲ ವ್ಯಕ್ತಿ ಅಜೀತ್ ನಾಯ್ಕ ಸಾಮಾಜಿಕ ಪರಿಶೋಧನೆ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಈ ಅವದಿಯಲ್ಲಿ ನಿರ್ವಹಿಸಿದ ಕಾಮಗಾರಿಗಳ ವಿವರವನ್ನು, ಹಿಂದಿನ ಸಭೆಯ ನಡಾವಳಿಯನ್ನು ಪಂಚಾಯತ ಲೆಕ್ಕ ಸಹಾಯಕ ವೆಂಕಟೇಶ ಗೌಡ ಓದಿ ಹೇಳಿದರು. ಅಭಿವೃದ್ದಿ ಅಧಿಕಾರಿ ಕವನಕುಮಾರ ವಂದಿಸಿದರು. ಪಂಚಾಯತ ಸದಸ್ಯರು ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ರಾಧಾ ನಾಯ್ಕ, ಎನ್.ಕೆ.ಭಟ್ ಹಾಜರಿದ್ದರು. ಸಭೆಯಲ್ಲಿ ಫಲಾನುಭವಿಗಳ ಜೊತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಸ್ವ ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.

RELATED ARTICLES  ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿ ಅಮೋಘ ಸಾಧನೆ