ಕಾರವಾರ: ತಾಲೂಕಿನ ಸದಾಶಿವಗಡದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ತಡ ರಾತ್ರಿ ಮುಳ್ಳಂದಿಯೊಂದು ಅಪಘಾತಕ್ಕೀಡಾಗಿ ತೀವ್ರ ಗಾಯಗೊಂಡಿರುವ ಘಟನೆ ನಡೆದಿದೆ. ರಾತ್ರಿ ವೇಳೆ ಅರಣ್ಯದಿಂದ ಆಹಾರ ಅರಸಿ ಬಂದ ಮುಳ್ಳಂದಿಯು ರಾಷ್ಟ್ರೀಯ ಹೆದ್ದಾರಿಯ ಮೇಲೆ ಬಂದಿದೆ. ಈ ಸಂದರ್ಭದಲ್ಲಿ ಹೆದ್ದಾರಿಯ ಮೂಲಕ ಸಂಚಾರ ಮಾಡುವ ಯಾವುದೋ ವಾಹನದ ಅಡಿಯಲ್ಲಿ ಸಿಕ್ಕು ಗಾಯಗೊಂಡು ರಕ್ತಸ್ರಾವವಾಗಿದೆ. ಅದನ್ನು ಕಂಡ ಜನರು ರಕ್ಷಣೆಗೆ ಪ್ರಯತ್ನಿಸಿದರಾದರೂ ಅದರ ಮೈ ಪೂರ್ತಿ ಮುಳ್ಳಿನಿಂದ ತುಂಬಿದ್ದರಿಂದ
ಸಾಧ್ಯವಾಗಿಲ್ಲ.

RELATED ARTICLES  ವಿಜಯವೇದಾಂಗ ಸ್ವಾಮಿಗಳಿಗೆ ಗೋಕರ್ಣ ಗೌರವ

ವಾಹನ ಹಾಯ್ದ ಕಾರಣ ಅದರ ಮೈಮೇಲೆ ಇರುವ ಮಳ್ಳುಗಳು ಕಿತ್ತು ಹೋಗಿದ್ದವು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಇಲಾಖೆಯವರು ಕ್ರಮಕೈಗೊಂಡಿದ್ದಾರೆ. ಮುಳ್ಳುಹಂದಿಗಳು ಈ ರೀತಿಯಾಗಿ ರಸ್ತೆಗಳಲ್ಲಿ ವಾಹನಗಳಿಗೆ ಸಿಲುಕುವುದು ತುಂಬಾ ಕಡಿಮೆ. ಬಹಳ ಚುರುಕಿನಿಂದ ಕೂಡಿದ ಈ ಪ್ರಾಣಿ ಬಹಳ ಅಪಾಯಕಾರಿಯೂ ಆಗಿದೆ. ಹೀಗಾಗಿ ಜನರು ಮುಳ್ಳುಹಂದಿಯ ಅಪಘಾತದ ಸಂದರ್ಭದಲ್ಲಿ ಅದರ ಹತ್ತಿರ ಹೋಗಲು ಅಷ್ಟು ಸುಲಭವಾಗಿ ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

RELATED ARTICLES  ರವಿಕುಮಾರ ಶೆಟ್ಟಿಯವರ ನೇತೃತ್ವದಲ್ಲಿ ನಡೆಯುವ ಕುಮಟಾ ಉತ್ಸವಕ್ಕೆ ಕ್ಷಣಗಣನೆ.