ಭಟ್ಕಳ: ತಾಲೂಕಿನ ಮಾರುಕೇರಿಯ ಹೂತ್ಕಲದಲ್ಲಿ ತೋಟದಲ್ಲಿ ಕೃಷಿ ಚಟುವಟಿಯಲ್ಲಿ ತೊಡಗಿದ್ದ ವೇಳೆ ರೈತನೊಬ್ಬನಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವಿದ್ಯುತ್ ಅವಘಡದಿಂದಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮನೆಯ ಮುಂದಿನ ತೋಟದಲ್ಲಿ ಕೃಷಿ ಚಟುವಟಿಯಲ್ಲಿ ತೊಡಗಿದ್ದಾಗ ಕೊಕ್ಕೆಯನ್ನು ಕೈಯಲ್ಲಿ ಹಿಡಿದು ಹೀರೆಕಾಯಿ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕೈಯಲ್ಲಿದ್ದ ಕೊಕ್ಕೆ ವಿದ್ಯುತ್ ತಂತಿಗೆ ತಗುಲಿ ಕೊಕ್ಕೆಯ ಮುಖಾಂತರ ವ್ಯಕ್ತಿಗೆ ವಿದ್ಯುತ್ ತಗುಲಿದ ಪರಿಣಾವಾಗಿ ಈ ಅವಘಡ ಸಂಭವಿಸಿದೆ. ಮೃತ ವ್ಯಕ್ತಿಯನ್ನು ನಾಗೇಶ ಮಂಜಯ್ಯ ಭಟ್(48) ಎಂದು ಗುರುತಿಸಲಾಗಿದೆ.

RELATED ARTICLES  ಯಲ್ಲಾಪುರ ಕ ಸಾ ಪ ದಿಂದ ಚಿಟ್ಟಾಣಿಯವರ ಅಗಲುವಿಕೆಗೆ ಸಂತಾಪ ಸಭೆ

ವಿದ್ಯುತ್ ತಗುಲುತ್ತಿದ್ದಂತೆ ವ್ಯಕ್ತಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ನಂತರ ಮೃತ ವ್ಯಕ್ತಿಯನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಭೈರುಂಬೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತುಕರಾಮ ನಾಯ್ಕ ಇನ್ನಿಲ್ಲ.