ಕಾರವಾರ : ಕಾರೊಂದು ಫೈ ಓವರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದ ರಭಸಕ್ಕೆ ಕಾರು ಸುಟ್ಟು ಕರಕಲಾದ ಘಟನೆ ನಡೆದಿದೆ. ನಗರದ ಆರ್.ಟಿ.ಓ ಕಚೇರಿ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು ರಾತ್ರಿ ಸಂಭವಿಸಿದ ಈ ಅಪಘಾತದಿಂದಾಗಿ ಕೆಲಕಾಲ ಸ್ಥಳದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.

RELATED ARTICLES  ಮಕ್ಕಳ ಕೈಯಲ್ಲಿ ಕಲ್ಲು ಕೊಡುವವರ ಕೈ ಮುರಿಯಬೇಕು: ಆರ್.ವಿ ದೇಶಪಾಂಡೆ.

ಈ ಘಟನೆ ಬುಧವಾರ ರಾತ್ರಿ ನಡೆದಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನ ಮಹಮ್ಮದ್ ಅಶ್ರಫ್ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು ಗೋವಾದಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ಇದಾಗಿತ್ತು ಎನ್ನಲಾಗಿದೆ.

ಸ್ವೀಪ್ ಕಾರು ಇದಾಗಿದ್ದು, ನಗರದ ಆರ್‌ಟಿಓ ಕಚೇರಿ ಸಮಿಪಿಸುತ್ತಿದ್ದಂತೆ ನಿಮಾರ್ಣಹಂತದಲ್ಲಿರುವ ಫೈ ಓವರ್ ಕಂಬಕ್ಕೆ ಗುದ್ದಿದೆ. ಬಳಿಕ ಏಕಾಏಕಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಸಂಪೂರ್ಣ ಕರಕಲಾಗಿದೆ. ಕಾರು ಚಾಲಕ ಮಹಮ್ಮದ್ ಅಶ್ರಫ್ ಎಂಬಾತನಿಗೆ ಚಿಕ್ಕ ಪುಟ್ಟ ಗಾಯಗಳಾಗಿದೆ. ಪ್ರಕರಣ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

RELATED ARTICLES  ಟ್ಯಾಕ್ಸಿ ಚಾಲಕರಿಗೆ ದಿನಸಿ ಕಿಟ್ ವಿತರಿಸಿದ ರವಿಕುಮಾರ್ ಶೆಟ್ಟಿ.