ಶಿರಸಿ: ಪಟಾಕಿಗಳನ್ನು ರಸ್ತೆ ಮೇಲೆ ಹೊಡೆಯುವುದರಿಂದ ಟ್ರಾಫಿಕ್‌ ಸಮಸ್ಯೆ ಹಾಗೂ ವಾಯು ಮಾಲಿನ್ಯದ ಸಮಸ್ಯೆ ಆಗುತ್ತದೆ ಎಂದಾದರೆ ರಸ್ತೆ ಮೇಲೆ ನಮಾಜು ಮಾಡುವುದರಿಂದಲೂ ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ. ಪ್ರತಿನಿತ್ಯ ಆಝಾನ್ ಕೂಗುವುದರಿಂದ ಶಬ್ದ ಮಾಲಿನ್ಯವಾಗುತ್ತದೆ. ಆ ಕುರಿತಾಗಿಯೂ ತಾವು ತಮ್ಮ ಜಾಹಿರಾತಿನಲ್ಲಿ ತೋರಿಸಿ ಎಂದು ಸಂಸದ ಹೆಗಡೆ ಹೇಳಿದ್ದಾರೆ.

ನಟ ಅಮೀರ್ ಖಾನ್ ನಟಿಸಿರುವ ಸಿಯೆಟ್ ಬೈಕ್ ಟೈರಿನ ಜಾಹಿರಾತೊಂದರಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ಬರುವಂತೆ ಬಿಂಬಿಸಲಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಅಸಮಾಧಾನ ವ್ಯಕ್ತಪಡಿಸಿ, ಈ ಕುರಿತು ಸಿಯೆಟ್ ಬೈಕ್ ಟೈರಿನ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

RELATED ARTICLES  ಗಾಂಧಿ ಶಾಲೆಯಲ್ಲಿ ಕನ್ನಡ ನುಡಿ ಹಬ್ಬ

ಜೊತೆಗೆ ಈ ಕೂಡಲೇ ಸಿಯೆಟ್‌ ತನ್ನ ಜಾಹೀರಾತನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಅಮೀರ್ ಖಾನ್ ಅಭಿನಯಿಸಿರುವ ಜಾಹೀರಾತು ಒಂದರಲ್ಲಿ ದೀಪಾವಳಿ ಹಬ್ಬದಲ್ಲಿ ಹಿಂದುಗಳಿಗೆ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ. ಆದರೆ ಪ್ರತಿದಿನ ಬೆಳಗ್ಗೆ ಚೀರುವ ಧ್ವನಿವರ್ಧಕಗಳು, ರಸ್ತೆಗಳ ಮಧ್ಯದಲ್ಲಿ ನಮಾಜ್ ಮಾಡುವುದು ಇನ್ನು ಎಷ್ಟೋ ಆಚರಣೆಗಳು ಅಮೀರ್ ಖಾನ್ ಗಮನ ಹರಿಸಿದರೆ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಪತ್ರದಲ್ಲಿ ಹೇಳಿದ್ದಾರೆ.

RELATED ARTICLES  ಕುಮಟಾ ವೈಭವಕ್ಕೆ ದಿನಗಣನೆ: ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಪೂರ್ಣ ವಿವರ ನೀಡಿದ ಸಮಿತಿ ಸದಸ್ಯರು.

ಈ ರೀತಿಯ ಜಾಹೀರಾತುಗಳು ಹಿಂದುಗಳ ಭಾವನೆಗಳನ್ನು ತುಳಿಯಲು ಮಾಡಿದ ಕುತಂತ್ರ.. ಅಂತೆಯೇ ಭಾರತದಲ್ಲಿ ಇಂತಹ ಹಿಂದೂ ವಿರೋಧಿ ನಟರಿಗೇನು ಕಮ್ಮಿಯಿಲ್ಲ. ಎಂದು ಹೇಳಿರುವ ಅವರು,  ತಕ್ಷಣವೇ ಜಾಹೀರಾತನ್ನು ಹಿಂಪಡೆಯಬೇಕು ಹಾಗೂ ಹಿಂದೂಗಳೇ ಆಗಿರುವ ಅವರು ಹಿಂದುಗಳ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ಅವರು ಗೋಯೆಂಕಾ ಅವರಿಗೆ ಪತ್ರ ಬರೆದಿದ್ದಾರೆ.