ಕುಮಟಾ : ಪಟ್ಟದ ಕೋರ್ಟ ಸಮೀಪ ಸುವರ್ಣ ಕೋ ಓಪರೇಟಿವ್ ಬ್ಯಾಂಕ್ ಕಟ್ಟಡದಲ್ಲಿದ್ದ ಹರೀಶ ಹೆಗಡೆ ಮಾಲಿಕತ್ವದ ಕಂಪ್ಯೂಟರ್ ಲ್ಯಾಂಡ್ ಅನ್ನು, ಕುಮಟಾ ಪಟ್ಟಣದ ನೆಲ್ಲಿಕೇರಿಯ ವೈಭವ ಹೊಟೆಲ್ ಎದುರುಗಡೆಯ ಎಸ್.ಎಸ್. ಹೆಗಡೆ ಬಿಲ್ಡಿಂಗಿಗೆ ಸ್ಥಳಾಂತರಿಸಲಾಗಿದ್ದು, ಶಾಸಕ ದಿನಕರ ಶೆಟ್ಟಿಯವರು ನೂತನ ಕಟ್ಟಡದ ಉದ್ಘಾಟನೆಮಾಡಿದರು.
ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿ ಕುಮಟಾ ಪಟ್ಟಣಕ್ಕೆ ಮೊಟ್ಟ ಮೊದಲನೆಯದಾಗಿ ಕಂಪ್ಯೂಟರ್ ಮಳಿಗೆಯನ್ನು ಪರಿಚಯಿಸಿದವರು ಹರೀಶ ಹೆಗಡೆಯವರು, ಅವರು ವಿದ್ಯಾವಂತರಾಗಿ ದೂರದ ಪಟ್ಟಣಕ್ಕೆ ಉದ್ಯೋಗ ಅರಸಿ ಹೋಗಬಹುದಿತ್ತು ಆದರೆ ಕುಮಟಾ ಜನತೆಗೆ ಕಂಪ್ಯೂಟರ್ ಸೇವೆ ಒದಗಿಸಬೇಕು ಅನ್ನುವ ಸದುದ್ದೇಶದಿಂದ ಕುಮಟಾ ಜನತೆಗೆ ಸೇವೆ ನೀಡುತ್ತಿದ್ದಾರೆ ಎಂದು ಶುಭ ಹಾರೈಸಿದರು.
ಕಂಪ್ಯೂಟರ ಲ್ಯಾಂಡ್ ಮಾಲಕ ಹರೀಶ ಹೆಗಡೆ ಮಾತನಾಡಿ ಕಳೆದ 18 ವರ್ಷಗಳಿಂದ ಕಂಪ್ಯೂಟರ್ ಮಾರಾಟ ಮತ್ತು ರಿಪೇರಿ ಮಳಿಗೆ ನಡೆಸಿಕೊಂಡು ಬರುತ್ತಿದ್ದೇನೆ, ಮಳಗೆ ಸ್ಥಳಾಂತರಗೊಂಡಿದೆ , ಜನಸಾಮಾನ್ಯರು ತಮಗೆ ನಿರಂತರ ಸಹಕಾರ ನೀಡಬೇಕೆಂದು ವಿನಂತಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಮಾಲಕ ಎಸ್ ಎಸ್ ಹೆಗಡೆ, ಕುಮಟಾ ಪುರಸಭಾ ಉಪಾಧ್ಯಕ್ಷ ರಾಜೇಶ ಪೈ , ಎಂ.ಎಂ ಹೆಗಡೆ ಹೊಲನಗದ್ದೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.