ಬಾಗಲಕೋಟೆ: ರಾತ್ರಿ ಸುರಿದ ಮಳೆಗೆ ಜಿಲ್ಲೆಯ ನಾನಾ ಗ್ರಾಮಗಳಲ್ಲಿ ಮನೆಯ ಗೋಡೆ ಕುಸಿದಿದ್ದು, ಅಪಾರ ಹಾನಿ  ಸಂಭವಿಸಿದೆ. ಹಾನಿಗೊಳಗಾಗಿರುವ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಭೇಟಿ ನೀಡಿ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ

ಜಿಲ್ಲೆಯಲ್ಲಿ ರಾತ್ರಿ ಭಾರೀ ಮಳೆ ಸುರಿದಿದ್ದು ನಿರಂತರ ಮಳೆಯಿಂದಾಗಿ ಜಮಖಂಡಿ ತಾಲೂಕಿನ ರಬಕವಿ, ಬನಹಟ್ಟಿ, ಜಗದಾಳ, ಮದಲಮಟ್ಟಿ ಗ್ರಾಮಗಳ ತಲಾ ಮನೆಯ ಗೋಡೆಗಳು ಕುಸಿದಿದೆ.  ಹಿಪ್ಪರಗಿ ಗ್ರಾಮದಲ್ಲಿ ಎರಡು ಮಬೆಗಳ ಗೋಡೆ ಕುಸಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿರುವ ವರದಿಯಾಗಿಲ್ಲ. ಮಳೆಯಿಂದಾಗಿ ರೈತರ ಮೊಗದಲ್ಲಿ ಸಂತಸ ಕಂಡು ಬಂದರೂ ಈ ರೀತಿ ಹಾನಿಯಾಗಿರುವುದು ಬೇಸರ ಮೂಡಿಸಿದೆ ಎಂದರು.

RELATED ARTICLES  ಮೂವರು ಚುನಾವಣಾ ಆಯುಕ್ತರ ಸಂಬಳ ಎರಡು ಪಟ್ಟು ಹೆಚ್ಚಳ!

ಬನಹಟ್ಟಿ ನಗರದಲ್ಲಿ ಜೋರಾಗಿ ಮಳೆ ಆಗಿದ್ದರಿಂದ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ಹರಿದು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಹಳಂಗಳಿ ಗ್ರಾಮದಲ್ಲಿ ಭಾರಿ ಮಳೆಯಿಂದ ಗ್ರಾಮದ ಜಲಮಂದಿರ ಕೆರೆ ತುಂಬಿದ್ದು, ಜನರಲ್ಲಿ ಹರ್ಷ ಉಂಟು ಮಾಡಿದೆ.

RELATED ARTICLES  ಬನ್ನೇರುಘಟ್ಟ: ಬಿಳಿ ಹುಲಿಗೆ ಆಹಾರ ನೀಡಲು ತೆರಳಿದ್ದವರೆ ಹುಲಿಗೆ ಆಹಾರವಾದ್ರು!