ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎಡಬಿಡದೆ ಅಕ್ರಮ ಜಾನುವಾರು ಸಾಗಾಟ ಪ್ರಕರಣಗಳು ವರದಿಯಾಗುತ್ತಿದ್ದು, ಒಂದಿಲ್ಲೊಂದು ಕಡೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಭಟ್ಕಳ, ಮಂಗಳೂರು, ಕೇರಳ ಭಾಗಗಳಿಗೆ ಅಕ್ರಮ ಜಾನುವಾರುಗಳ ಸಾಗಟ ಜಾಲ ನಿರಂತರವಾಗಿ ಕಾರ್ಯ ಮಾಡುತ್ತಿದೆಯೇ ಎಂಬ ಅನುಮಾನಗಳೂ ಕಾಡುತ್ತಿದೆ. ಇಂದು ಅಂತಹುದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.

ಅಂಕೋಲಾ ತಾಲೂಕಿನ ಕೊಡಸಣಿ ಕ್ರಾಸ್ ಬಳಿ ಲಾರಿಯೊಂದರಲ್ಲಿ ಹಿಂಸಾತ್ಮಕವಾಗಿ ಯಾವುದೇ ಪರವಾನಗಿ ಇಲ್ಲದೇ ಸಾಗಿಸುತ್ತಿದ್ದ 17 ಕೋಣಗಳನ್ನು ಅಂಕೋಲಾ ಪೊಲೀಸರು ರಕ್ಷಿಸಿದ್ದು  ಅಕ್ರಮ ಜಾನುವಾರು ಸಾಗಾಟಕ್ಕೆ ಬಳಸಿದ್ದ ದೊಡ್ಡ ಲಾರಿ (ಕೆಎ 01, ಎ ಎಲ್ 2779 ) ಬೆಂಗಾವಲಾಗಿ ಬಂದಿದ್ದ ಇನೋವಾ ವಾಹನ ಜಪ್ಪು ಮಾಡಿ ವಶಪಡಿಸಿಕೊಂಡಿದ್ದಾರೆ.

RELATED ARTICLES  ಮುಖ್ಯಮಂತ್ರಿಗಳ ಪತ್ನಿಯಿಂದ ಗೋಕರ್ಣದಲ್ಲಿ ಪೂಜೆ ಸಲ್ಲಿಕೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.ಬೆಳ್ತಂಗಡಿ ನಿವಾಸಿ ಲಾರಿ ಚಾಲಕ ಹೈದರ್ ರೆಹಮನ್ ಬ್ಯಾರಿ(40)ಅಂಕೋಲಾ ಶಿರಗುಂಜಿಯ ಬೊಮ್ಮಯ್ಯ ಬೀರಣ್ಣ ನಾಯಕ (80) ಹಾಸನ ಹಳೇಕೊಪ್ಪಲಿನ ಮಂಜೇಗೌಡ ಜವರೇಗೌಡ(62)ಕೇರಳ ಕಾಸರಗೋಡದ ಅಬ್ದುಲ್ ರಿಯಾಜ್ ಮಹಮ್ಮದ್ (27) ಬಂಧಿತ ಆರೋಪಿಗಳಾಗಿದ್ದು ಇನ್ನೊರ್ವ ಆರೋಪಿ ಕೇರಳದ ಅಬುಬಕರ್ ರಿಯಾಜ್ ಎಂಬಾತ ತಪ್ಪಿಸಿಕೊಂಡು  ಓಡಿ ಹೋಗಿದ್ದಾನೆ.

RELATED ARTICLES  ಸಹಸ್ರ ಸಹಸ್ರ ಭಕ್ತರ ಸಮ್ಮುಖದಲ್ಲಿ ಸಂಭ್ರಮದ ಹೆಗಡೆ ಜಾತ್ರೆ ಸಂಪನ್ನ

ಆರೋಪಿತರಿಂದ 2ಲಕ್ಷ 25 ಸಾವಿರ ಮೌಲ್ಯದ 17 ಕೋಣಗಳು, 6ಲಕ್ಷ  ಮೌಲ್ಯದ ಲಾರಿ 3 ಲಕ್ಷ ಮೌಲ್ಯದ ಇನೋವಾ ವಾಹನ, 47 ಸಾವಿರ ಮೌಲ್ಯದ ಮೂರು ಮೊಬೈಲ್ ಪೋನುಗಳು ಮತ್ತು 30 ಸಾವಿರ ನಗದು ಹಣ ವಶಪಡಿಸಿಕೊಳ್ಳಲಾಗಿದೆ.