ಭಟ್ಕಳ : ಜೀವನ ನಡೆಸುವುದಕ್ಕಾಗಿ ಮೀನುಗಾರಿಕೆಯನ್ನೇ ಅವಲಂಬಿಸಿರುವ ಅದೆಷ್ಟು ಜನ ಮೀನುಗಾರಿಕೆಗಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು ಇದೆ. ಇಂತಹದೇ ಒಂದು ಘಟನೆ ಭಟ್ಕಳದಿಂದ ವರದಿಯಾಗಿದೆ.
ಮೀನುಗಾರಿಕೆಗೆ ಭಟ್ಕಳ ಬಂದರಿನಿಂದ ತೆರಳಿದ ವ್ಯಕ್ತಿಯೊಬ್ಬ ಬೋರ್ಡ್ ನಿಂದ ಕಾಲು ಜಾರಿ ಬಿತ್ತು ನೀರುಪಾಲಾದ ಘಟನೆ ನಡೆದಿದೆ ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು ನೀರಿನಲ್ಲಿ ಬಿದ್ದ ವ್ಯಕ್ತಿಯನ್ನು ಹುಡುಕಲು 24 ಗಂಟೆಗಳ ಕಾರ್ಯಾಚರಣೆ ನಡೆಸಲಾಯಿತು ಮಂಗಳವಾರ ರಾತ್ರಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ವ್ಯಕ್ತಿಯನ್ನು ಬಿಹಾರ ಮೂಲದ ಪಿಂಟೋ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಎ.ಎಸ್.ಐ ಭರತ್ ತನಿಖೆ ಕೈಗೊಂಡಿದ್ದಾರೆ. ವ್ಯಕ್ತಿಯ ಶವವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.