ಭಟ್ಕಳ- ಕೇಂದ್ರ ಹಾಗೂ ರಾಜ್ಯ ಸರ್ಕಾರವು ಗ್ರಾಮೀಣ ಭಾಗದಲ್ಲಿ ಕೈಗೊಳ್ಳುವ ಹೆಚ್ಚಿನ ಯೋಜನೆಗಳಿಗೆ ಸಾಮಾಜಿಕ ಪರಿಶೋಧನೆ ಯನ್ನು ಕಡ್ಡಾಯಗೊಳಿಸುತ್ತಿದ್ದು ಈ ದಿಸೆಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಸಾಮಾಜಿಕ ಪರಿಶೋಧನೆ ಬಗ್ಗೆ ಅರಿವು ಆಂದೋಲನ ಹಮ್ಮಿಕೊಳ್ಳಲು ಸೂಚಿಸಿದೆ.


ಈ ದಿಸೆಯಲ್ಲಿ ಸಾಮಾಜಿಕ ಪರಿಶೋಧನಾ‌ ನಿರ್ದೇಶನಾಲಯದ ಆದೇಶ ಹಾಗೂ ಮಾರ್ಗದರ್ಶನದ ಮೇರೆಗೆ ಗುರುವಾರ ತಾಲೂಕಿನ ಬೆಂಗ್ರೆ ಪಂಚಾಯತ್ ವ್ಯಾಪ್ತಿಯ ಸಣಬಾವಿ ಚಿಟ್ಟಿಹಕ್ಕಲು ಮಜಿರೆಗಳಲ್ಲಿ ಸಾಮಾಜಿಕ ಪರಿಶೋಧನೆ ಅರಿವು ಆಂದೋಲನ ಜಾತಾ ಕೈಗೊಳ್ಳಲಾಯಿತು.


ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉದಯ ಬೋರ್ಕರ್ ಅವರ ಸಾರಥ್ಯದಲ್ಲಿ ತಾಲೂಕು ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ಮುಂಡಳ್ಳಿ ಹಾಗೂ ಗ್ರಾಮಸಂಪನ್ಮೂಲ ವ್ತಕ್ತಿಗಳ ಮುಂದಾಳತ್ವದಲ್ಲಿ ಅರಿವು ಅಭಿಯಾನ ಜಾತಾ ನಡೆಸಲಾಯಿತು.ಜಾತಾ ವೇಳೆಯಲ್ಲಿ ನರೇಗಾ ಯೋಜನೆಯ ಸಂಪೂರ್ಣ ವಿವರ ಕಾಮಗಾರಿಗಳ ಚಿತ್ರಸಹಿತ ವಿವರಗಳನ್ನೊಳಗೊಂಡ ಕೈಪಿಡಿ ಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು ಹಾಗೂ ಪ್ರತಿ ಸಾಮಾಜಿಕ ಪರಿಶೋಧನೆ ಗ್ರಾಮಸಭೆಗೆ ಕಡ್ಡಾಯವಾಗಿ ಹಾಜರಿರಿರುವಂತೆ ಮನವಿ ಮಾಡಲಾಯಿತು.

RELATED ARTICLES  ಖಾತೆಯ ಕೆವೈಸಿ ಮಾಡಿಸಿ ಕೊಡುವುದಾಗಿ ನಂಬಿಸಿ 83 ಸಾವಿರ ಎಗರಿಸಿದರು.


ಧ್ವನಿವರ್ಧಕ ಹೊಂದಿದೆ ಜಾತಾ ವಾಹನದೊಂದಿಗೆ ಜಾತಾ ನಡೆಸಿದ್ದು ವಿಶೇಷ ವಾಗಿತ್ತು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಬೇಬಿ ನಾಯ್ಕ, ಸದಸ್ಯರಾದ ಗೋವಿಂದ ನಾಯ್ಕ ಹಾಗೂ ಸಾಮಾಜಿಕ ಪರಿಶೋಧನಾ ಸಂಯೋಜಕ ಉಮೇಶ ಮುಂಡಳ್ಳಿ ಅವರೊಡನೆ ಗ್ರಾಮಸಂಪನ್ಮೂಲ ವ್ಯಕ್ತಿಗಳಾದ ಪ್ರಿಯಾಂಕ ನಾಯ್ಕ,ಆಶಾ ನಾಯ್ಕ ,ಸ್ವಾತಿ ನಾಯ್ಕ,ಉಷಾ ಖಾರ್ವಿ, ಶಿಲ್ಪಾ ನಾಯ್ಕ,ನಾಗರತ್ನ ಮೊಗೆರ ಜೊತೆಗೆ ಪಂಚಾಯತ್ ಕಾರ್ಯದರ್ಶಿ ಎಂ. ಎ.ಗೌಡ, ಲೆಕ್ಕ ಸಹಾಯಕ ಶಂಕರ ದೇವಾಡಿಗ ,ಯೋಗೇಶ ನಾಯ್ಕ,ಪದ್ಮಯ್ಯ ಬಾಕಡ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಬಿಎಪ್ಟಿಗಳು, ಸ್ವಸಹಾಯ ಸಂಘದ ಸದಸ್ಯರು ಊರ ನಾಗರಿಕರು ಪಾಲ್ಗೊಂಡರು.

RELATED ARTICLES  ಕಾಣೆಯಾಗಿದ್ದಾರೆ.