ಶಿರಸಿ: ಒಂದೆಡೆ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆ ಹಾಗೂ ಅಕ್ರಮ ಸಾಗಾಣಿಕೆಗಳ ನಡುವೆ ಜಿಲ್ಲೆಯ ಜನರು ಬೆಚ್ಚಿಬೀಳುವಂತಹ ಪ್ರಕರಣವೊಂದು ವರದಿಯಾಗಿದೆ. ಹಸುವೊಂದನ್ನು ಮಾಂಸಕ್ಕಾಗಿ ಅಕ್ರಮವಾಗಿ ಕಾಡಿನಲ್ಲಿ ಕಡಿಯುತ್ತಿರುವಾಗಲೇ ಪೋಲೀಸರು ದಾಳಿ ನಡೆಸಿ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದ ಘಟನೆ ವರದಿಯಾಗಿದೆ
ಕಾಡಿನಲ್ಲಿ ಹಸುವನ್ನು ಮಾಂಸಕ್ಕಾಗಿ ಕಡಿಯಲಾಗುತ್ತಿತ್ತು ಎಂದು ಮಾಹಿತಿಯರಿತ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ, ದಾಳಿ ವೇಳೆ ಮೂವರು ತಪ್ಪಿಸಿಕೊಂಡಿದ್ದು, ಓರ್ವನನ್ನು ಬಂಧಿಸಲಾಗಿದೆ.
ಆರೋಪಿಯ ಪತ್ತೆಗಾಗಿ ಗ್ರಾಮೀಣ ಠಾಣೆ ಪೋಲೀಸರು ಬಲೆ ಬೀಸಿದ್ದಾರೆ. ಈ ಘಟನೆ ನಡೆದಿರೋದು ತಾಲೂಕಿನ ಗೌಡಳ್ಳಿಯಲ್ಲಿ. ಗೌಡಳ್ಳಿಯ ನಜೀರ್ ಅಹಮದ್ ಸಾಬ್ ಅಬ್ದುಲ್ ವಾಹಿದ್ ಸಾಬ್ ಬಂಧಿತ ಆರೋಪಿ. ಇಲ್ಲಿನ ಉರ್ದುಶಾಲೆಯ ಹಿಂಭಾಗದ ಕಾಡಿನ ಜಾಗದಲ್ಲಿ ಜಾನುವಾರು ಕಡಿಯುತ್ತಿರುವಾಗ ದಾಳಿ ನಡೆಸಿ ಬಂಧಿಸಲಾಗಿದೆ. ದಾಳಿ ವೇಳೆ ಕಡಿಯಲು ಉಪಯೋಗಿಸಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.