ಹೊನ್ನಾವರ: ಚಲಿಸುತ್ತಿದ್ದ ರೈಲಿಗೆ ವ್ಯಕ್ತಿಯೊಬ್ಬ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ತಾಲೂಕಿನ ಹಳದೀಪುರದಲ್ಲಿ ನಡೆದ ಘಟನೆ ಇದಾಗಿದ್ದು, ರಾತ್ರಿಯ ವೇಳೆ ವ್ಯಕ್ತಿ ಈ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಕಾರವಾರ ಬೆಂಗಳೂರು ಪಂಚಗoಗ ಎಕ್ಸ್ ಪ್ರೆಸ್ ರೈಲು ಆಗಮಿಸುವ ವೇಳೆ ಹಳಿಯ ಮೇಲೆ ಅಡ್ಡಲಾಗಿ ಮಲಗಿ ರೈಲಿಗೆ ತಲೆಕೊಟ್ಟು ವ್ಯಕ್ತಿ ಸಾವಿಗೆ ಶಣರಾಗಿರಬಹುದು ಎಂದು ಅಂದಾಜಿಸಲಾಗಿದೆ.ಈ ದುರ್ಘಟನೆಯಲ್ಲಿ ವ್ಯಕ್ತಿಯ ರುಂಡ – ಮುಂಡ ಬೇರೆ ಬೇರೆಯಾಗಿದೆ. ಘಟನಾ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

RELATED ARTICLES  ಪ್ರಗತಿ ವಿದ್ಯಾಲಯ ಮೂರೂರಿನಲ್ಲಿ ಯಶಸ್ವಿಯಾಯ್ತು ಕ್ರೀಡಾ ಕಲೋತ್ಸವ

ಮೃತ ವ್ಯಕ್ತಿ ಸಾಲಿಕೇರಿ ನಿವಾಸಿ ತುಳಸು ಗೌಡ ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾಗಿದ್ದು, ಹೊನ್ನಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಕುಟುಂಬದವರ ಆಕೃಂದನ ಮುಗಿಲುಮುಟ್ಟಿದೆ ಎನ್ನಲಾಗಿದೆ.

RELATED ARTICLES  ಬಿಜೆಪಿಗೆ ಸೇರ್ಪಡಗೊಂಡ ಮುಸ್ಲಿಂ ಮಹಿಳೆಯರು!