ಶಿರಸಿ : ಯಕ್ಷಗಾನದಲ್ಲಿ ತನ್ನದೇ ವಿಶೇಷ ಛಾಪು ಮೂಡಿಸಿ ಯಕ್ಷರಂಗದ ಗೋಡೆ ಎಂದೇ ಹೆಸರಾದ, ಸಾವಿರಕ್ಕೂ ಮಿಕ್ಕಿ ಕೌರವನ ಪಾತ್ರ ಮಾಡಿದ ಗೋಡೆ ನಾರಾಯಣ ಹೆಗಡೆ ಅವರಿಗೆ ಪ್ರತಿಷ್ಠಿತ ಅನಂತ ಶ್ರೀ ಪ್ರಶಸ್ತಿ ಪ್ರಕಟವಾಗಿದೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ, ವಿ. ಉಮಾಕಾಂತ ಭಟ್ಟ ಕೆರೇಕೈ ಈ ವಿಷಯ ತಿಳಿಸಿ, ಗೋಡೆ ಅವರು ಯಕ್ಷಗಾನಕ್ಕೆ ಮಾಡಿದ ಅನವರತ ಕಾರ್ಯ ಕೊಡುಗೆ ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೊಳಗಿ ಅನಂತ ಹೆಗಡೆ ಅವರೂ ನಾಲ್ಕು ದಶಕಗಳ ಕಾರ್ಯ ಯಕ್ಷಗಾನದಲ್ಲಿ ಕೆಲಸ ಮಾಡಿದವರು. ಅವರ ನೆನಪಿನ ಪ್ರಶಸ್ತಿ ಇದಾಗಿದೆ. ಅ.31ರ ಮದ್ಯಾಹ್ನ 3.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಉತ್ತರ ಕನ್ನಡದ ಶಿರಸಿ ಟಿಎಂಎಸ್
ಸಭಾಂಗಣದಲ್ಲಿ ನಡೆಯಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬಾರ್, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ಪತ್ರಕರ್ತ ರವೀಂದ್ರ ಭಟ್ಟ, ಎಪಿಐಟಿ ಮುಖ್ಯಸ್ಥ ಶಶಿಕುಮಾರ್ ತಿಮ್ಮಯ್ಯ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.