ಗುತ್ತಿಗಾರು ಹವ್ಯಕ ವಲಯ ಮತ್ತು ಅನೂಚಾನ ವಿದ್ಯಾಪ್ರತಿಷ್ಟಾನ ಇದರ ಆಶ್ರಯದಲ್ಲಿ ಬೆಳಗ್ಗೆ ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, ಗುರುವಂದನೆಯ ನಂತರ ಉಪಾಕರ್ಮ ಹೋಮ, ನೂತನ ಯಜ್ಞೋಪದಾರಣೆ, ಲಕ್ಷ್ಮೀಸಹಿತ ಶ್ರೀಸತ್ಯನಾರಾಯಣ ದೇವರ ಪೂಜೆ, ಮಾತೆಯರಿಂದ ಕುಂಕುಮಾರ್ಚನೆ ಮತ್ತು ಅಪರಾಹ್ನ ಸ್ವಾಸ್ಥ್ಯಮಂಗಲ ಸಭಾಕಾರ್ಯಕ್ರಮ ನಡೆಯಿತು.
ಅಧ್ಯಕ್ಷ ತೆ : ಸೀತಾರಾಮ ಭಟ್.ವಲಯಾಧ್ಯಕ್ಷರು.
ಶ್ರೀ ಮಠದ ಸನ್ನಧಿ ಸಂಸ್ಥೆಗಳ ಸಹಕಾರ್ಯದರ್ಶಿ ಮೊಗ್ರ ಸತ್ಯನಾರಾಯಣರವರು ಅತಿಥಿಗಳನ್ನು ಸ್ವಾಗತಿಸಿ, ಪ್ರಸ್ತುತ ವಿಷಯಗಳನ್ನು ಸಭೆಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಆಯುರ್ವೇದ ವೈದ್ಯರು ಮತ್ತು ಯೋಗ ತಜ್ಞರಾದ ಡಾ.ಕೃಷ್ಣ ಮೂರ್ತಿ ಯವರು ಆಹಾರದ ವಿಧಗಳು ಮತ್ತು ಅವುಗಳನ್ನು ನಾವು ಹೇಗೆ, ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ತಿಂದರೆ ನಮ್ಮ ಆರೋಗ್ಯವನ್ನು ಉಳಿಸಿಕೊಳ್ಳಲು ಸಾಧ್ಯ ವೆಂದು ತಿಳಿಸಿದರು. ಬೆಲ್ಲ ಸಿಹಿಯೆಂದು ತಿಳಿಯಬೇಕಾದರೆ ಅದನ್ನು ನಾವೇ ತಿಂದು ನೋಡಬೇಕು, ಹಾಗೆಯೇ ನಮ್ಮ ಆಹಾರವನ್ನು ನಾವೇ ನಿರ್ಧರಿಸಿ ತೆಗೆದುಕೊಂಡರೆ ರೋಗರಹಿತವಾಗಿ ಇರಲು ಸಾಧ್ಯವೆಂದು ತಿಳಿಸಿದರು. ಆಯರ್ವೇದವೆಂಬುದು ಜೀವನ ಪದ್ದತಿ. ಅದನ್ನು ಪ್ರತಿಯೊಬ್ಬರೂ ತಮ್ಮಲ್ಲಿ ಅಳವಡಿಸಿಕೊಂಡಾಗ ಸುಖೀ ಜೀವನ ನಡೆಸಲು ಸಾಧ್ಯವೆಂದು ತಿಳಿಸಿದರು.
ಇನ್ನೊಬ್ಬ ಮುಖ್ಯ ಅತಿಥಿ ಮಾಹಾಬಲೇಶ್ವರ ಭಟ್ಟರು ದೇಶೀ ಧನವನ್ನು ಸಾಕಿ ಹೇಗೆ ಲಾಭದಾಯಕ ಕೃಷಿ ಮಾಡಬಹುದೆಂದು ತಮ್ಮ ಅನುಭವವನ್ನು ಸಭೆಗೆ ತಿಳಿಸಿದರು.
ಕಾರ್ಯದರ್ಶಿ ಸೂರ್ಯನಾರಾಯಣ ಪುಚ್ಛೆಪ್ಪಾಡಿ ಧನ್ಯವಾದ ಸಮರ್ಪಿಸಿದರು. ಅನೂಚಾನ ವಿದ್ಯಾ ಪ್ರತಿಷ್ಠಾನದ ಕಾರ್ಯದರ್ಶಿ ಶಿವರಾಮ ಕರುವಜೆ ಕಾರ್ಯಕ್ರಮ ನಿರೂಪಿಸಿದರು.
ವಲಯ ಪದಾಧಿಕಾರಿಗಳಾದ ಗಂಗಾಧರ ಪುಚ್ಛೆಪ್ಪಾಡಿ, ಮಾತೃವಿಭಾಗದ ರಾಜೇಶ್ವರಿ, ಸಂಸ್ಕಾರ ವಿಭಾಗದ ಸುಬ್ರಹ್ಮಣ್ಯ ಭಟ್, ಶಿಷ್ಯಮಾದ್ಯಮ ವಿಭಾಗದ ಮುರಳೀಕೃಷ್ಣ, ಸೇವಾ ವಿಭಾಗದ ಜಯಸೂರ್ಯ, ಅನೂಚಾನ ಅಧ್ಯಕ್ಷ ರಾದ ಶ್ರೀ ಕೃಷ್ಣ ಗುಂಡಿಮಜಲು, ಗುರಿಕ್ಕಾರರುಗಳು ಉಪಸ್ಥಿತರಿದ್ದರು.
ವಲಯದ ಮಾತೃ, ಸಂಸ್ಕಾರ, ಕೃಷಿ , ಧಾರ್ಮಿಕ ವಿಭಾಗ ಮತ್ತು ಅನೂಚಾನ ವಿದ್ಯಾಪ್ರತಿಷ್ಟಾನದ ಸಹಕಾರದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

RELATED ARTICLES  ಪ್ರತಿಭಾ ಪುರಸ್ಕಾರ ಸಮಾರಂಭ ನಾಳೆ.