ಭಟ್ಕಳ: ಉತ್ತರಕನ್ನಡದಲ್ಲಿ ಮತ್ತೆ ಕಳ್ಳತನ ಪ್ರಕರಣಗಳು ವಿವಿಧ ತಾಲೂಕಿನಿಂದ ವರದಿಯಾಗುತ್ತಿದ್ದು, ಇಂದು ಒಂಟಿ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ.

ಭಟ್ಕಳ ತಾಲೂಕಿನ ಜಾಲಿ ಆಜಾದ್ ನಗರ 7ನೇ ಕ್ರಾಸನ ಅಬುಹನೀಫಾ ಸ್ಟ್ರೀಟನಲ್ಲಿನ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಬಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ ಎನ್ನಲಾಗಿದೆ.

RELATED ARTICLES  ರಾಜ್ಯ ಮಟ್ಟದ ಡಾಕ್ ಸೇವಾ ಪ್ರಶಸ್ತಿಗೆ ಮಂಗಲಾ ಭಾಗ್ವತ ಸಿರ್ಸಿ ಆಯ್ಕೆ

ಕಳ್ಳತನವಾದ ಮನೆಯಲ್ಲಿ ಉತ್ತರ ಪ್ರದೇಶ ಕೂಲಿ ಕಾರ್ಮಿಕರು ವಾಸವಾಗಿದ್ದು. ಇವರು ತಮ್ಮ ಕೆಲಸದ ನಿಮಿತ್ತ ಒಂದು ವಾರದ ಹಿಂದೇ ಕೆಲಸಕ್ಕಾಗಿ ಹೊನ್ನಾವರಕ್ಕೆ ತೆರಳಿದ್ದರು ಎನ್ನಲಾಗಿದೆ. ತಮ್ಮ ಕೆಲಸ ಮುಗಿಸಿ ಶುಕ್ರವಾರ ಬೆಳಿಗ್ಗೆ ತಾವು ವಾಸವಿದ್ದ ಬಾಡಿಗೆ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವ ಬಗ್ಗೆ ತಿಳಿದು ಬಂದಿದೆ ಎನ್ನಲಾಗಿದೆ.

RELATED ARTICLES  ಭಟ್ಕಳ ಕಸಾಪದಿಂದ ಯಶಸ್ವಿಯಾಗಿ ನಡೆದ ಸುಂದರ ಕೈ ಬರೆಹ ಮತ್ತು ದಾಸವಾಣಿ ಸ್ಪರ್ಧೆ

ಕೂಲಿ ಕೆಲಸಕ್ಕೆ ಬಳಸುವ ಸಾಮಾಗ್ರಿ, ಟಿವಿ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ಪೊಲೀಸ ತನಿಖೆಯಿಂದ ತಿಳಿದು ಬರಬೇಕಾಗಿದೆ . ಸ್ಥಳಕ್ಕೆ ಪಿ.ಎಸ್.ಐ ಭರತ್ ಕುಮಾರ ಹಾಗೂ ಪೊಲೀಸ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ತನಿಖೆಯ ನಂತರ ಪೂರ್ಣ ಮಾಹಿತಿ ತಿಳಿದುಬರಬೇಕಿದೆ.