ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಮ್ಮನ್ನಗಲಿದ ಶ್ರೀ ಎಸ್.ಎಮ್.ಶಾನಭಾಗ ಹೆಗಡೆಕರ್‌ರಿಗೆ ಕೊಂಕಣ ಸಮೂಹ ಸಂಸ್ಥೆಗಳಿಂದ ಶೃದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಕಾರ್ಯದರ್ಶಿಗಳಾದ ಶ್ರೀ ಮುರಲೀಧರ ಪ್ರಭು ಮಾತನಾಡಿ ದಿ.ಎಸ್.ಎಮ್.ಶಾನಭಾಗರು ಉದಾರಿಗಳು, ತ್ಯಾಗಿಗಳು ಆಗಿದ್ದು ದೂರದ ಮುಂಬೈನಲ್ಲಿ ಉದ್ಯಮ ಹೊಂದಿದ್ದರೂ ಮಾತೃಭೂಮಿಯ ಮೇಲಿನ ಪ್ರೀತಿ ಕಳಕಳಿಯಿಂದ ಕುಮಟಾದ ಹಲವು ಸಂಘ ಸಂಸ್ಥೆಗಳಿಗೆ ಉದಾರ ಮನಸ್ಸಿನಿಂದ ದಾನ ಧರ್ಮ ಮಾಡಿದವರು. ಅವರ ಸಮಯಪ್ರಜ್ಞೆ ಮತ್ತು ಮಾನವತೆಯ ಕಳಕಳಿ ನಮಗೆ ಆದರ್ಶಪ್ರಾಯವಾದದ್ದು ಎಂದು, ಅವರ ಅಗಲುವಿಕೆ ನಮಗೆಲ್ಲಾ ತುಂಬಾ ನೋವು ತಂದಿದೆ. ಅವರ ಕುಟುಂಬದವರಿಗೆ ಅವರ ಅಗಲುವಿಕೆಯ ನೋವು ಸಹಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸಿ ಪುಷ್ಪನಮನ ಸಲ್ಲಿಸಿದರು.

RELATED ARTICLES  ಕರ್ತವ್ಯದಲ್ಲಿದ್ದ ಎ.ಎಸ್.ಐ ಸಾವು..!

ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ನಾಯಕ ಮಾತನಾಡಿ, ದಿವಂಗತರಿಗೆ ಸದ್ಗತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಶಿಕ್ಷಕ ಶಿವಾನಂದ ಭಟ್ಟ ಮಾತನಾಡಿ ದಿವಂಗತರು ಕೊಂಕಣದ ಡಿಎಡ್ ಕಾಲೇಜಿಗೆ ಆಗಾಗ ಅವರು ಬಂದಾಗ ನಡೆದ ಸವಿಘಟನೆಗಳನ್ನು ಅವರ ಸಾಮಿಪ್ಯದ ಮಧುರ ಕ್ಷಣಗಳನ್ನು ನೆನೆಸಿಕೊಂಡರು. ಅದೇ ರೀತಿ ಶ್ರೀಮತಿ ಸುಜಾತಾ ಹೆಗಡೆ, ಆರ್.ಎಚ್. ದೇಶಭಂಡಾರಿಯವರು ಅವರೊಡಗಿನ ಒಡನಾಟ ಕುರಿತು ಮಾತನಾಡಿದರು.

RELATED ARTICLES  ಹೊನ್ನಾವರ ಮೂಲದ ಕೆ.ವಿ.ಜಿ ಬ್ಯಾಂಕ್ ರೀಜನಲ್ ಮ್ಯಾನೇಜರ್ ಮೇಲೆ ಹಲ್ಲೆ

ಟ್ರಸ್ಟಿಗಳಾದ ಅಶೋಕ ಪ್ರಭು, ಸಹಕಾರ್ಯದರ್ಶಿ ಶೇಷಗಿರಿ ಶಾನಭಾಗ, ಪ್ರಾಚಾರ್ಯರು ಹಾಗೂ ಅಂಗಸಂಸ್ಥೆಗಳ ಮುಖ್ಯಾಧ್ಯಾಪಕರು, ಶಿಕ್ಷಕರು ಪುಷ್ಪಾರ್ಚನೆಗೈದರು.