ಕಾರವಾರ: ಕಳ್ಳತನ ಮಾಡುವವರು ಬೇರೆ ಬೇರೆ ರೀತಿಯಲ್ಲಿ ಜನರನ್ನು ಲಪಟಾಯಿಸಲು ಹೊಂಚು ಹಾಕಿ ಕಾದು ಕುಳಿತಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ವರದಿಯಾಗಿದ್ದು, ಈ ರೀತೀನೂ ಮಾಡ್ತಾರಾ? ಎಂಬಂತಾಗಿದೆ. ನಗರದ ಜನತಾ ಬಝಾರ್ ಬಳಿ ವೃದ್ಧನೊಬ್ಬನ ಗಮನವನ್ನು ಬೇರೆಡೆ ಸೆಳೆದು ಬ್ಯಾಂಕಿನಿoದ ವಿತ್ ಡ್ರಾ ಮಾಡಿಕೊಂಡು ಬಂದಿದ್ದ ಹಣವನ್ನು ಲಪಟಾಯಿಸಿದ ಘಟನೆ ನಡೆದಿದೆ.

ಉಮೇಶ ಸಾವಂತ ಎನ್ನುವವರೇ ಹಣ ಕಳೆದುಕೊಂಡ ವ್ಯಕ್ತಿ ಎನ್ನಲಾಗಿದೆ. ಜನನಿಬಿಡ ಪ್ರದೇಶದಲ್ಲಿ ನೂರಾರು ಜನರ ಮಧ್ಯೆಯೇ ಕಳ್ಳರು ಹಣದ ಬ್ಯಾಗ್ ಎತ್ತಿಕೊಂಡು ಪರಾರಿಯಾಗುತ್ತಿದ್ದ ಎನ್ನಲಾಗಿದ್ದು, ಆತ ನನ್ನ ಹಣದ ಚೀಲವನ್ನು ಎತ್ತಿಕೊಂಡು ಹೋಗುತ್ತಿದ್ದಾನೆ ಎಂದು ಕೂಗಿದ್ದಾರೆ.

RELATED ARTICLES  ಸಂಪನ್ನವಾಯ್ತು ದೀಪಾವಳಿ : ಬೆಳಕಿನ ಹಬ್ಬದ ಜೊತೆ ಆಟಗಳ ರಂಗು!

ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿವಿಧ ಕಡೆಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿದ್ದು, ನಗರದ ವಿವಿಧ ಕಡೆಗಳಲ್ಲಿ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯವಾವಳಿಯಲ್ಲಿ ಓರ್ವನ ಫೋಟೋ ದೊರೆತಿದ್ದು, ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

ಘಟನೆಯೇನು?

ಉಮೇಶ್ ಸಾವಂತ್ ಅವರು ಬ್ಯಾಂಕಿನಿoದ ಹಣವನ್ನು ತೆಗೆದುಕೊಂಡು ನಗರದ ಜನತಾ ಬಝಾರ್ ಬಳಿ ಬಂದಿದ್ದರು. ಅವರನ್ನು ಹಿಂಬಾಲಿಸಿಕೊoಡು ಬಂದ ತಂಡವೊoದು ಹಣ ಲೂಟಿ ಮಾಡುವ ಉದ್ದೇಶದಿಂದ ಅವರ ಗಮನ ಬೇರೆಡೆಗೆ ಸೆಳೆದಿದೆ. ಅವರನ್ನೇ ಹಿಂಬಾಲಿಸಿಕೊoಡು ಬಂದು ಬೆನ್ನಿಗೆ ಯಾವುದೋ ಅಂಟನ್ನು ಲೇಪಿಸಿದ್ದಾರೆ. ನಿಮ್ಮ ಬೆನ್ನಿಗೆ ಯಾವುದೋ ಅಂಟು ಅಂಟಿದೆ ಎಂದು ತಿಳಿಸಿ, ವೃದ್ಧ ವ್ಯಕ್ತಿಗೆ ಅದನ್ನು ತೊಳೆಸುವ ನೆಪದಲ್ಲಿ , ಸಹಾಯ ಮಾಡುವಂತೆ ನಟಿಸಿ, ಜನತಾ ಬಝಾರಿನ ಒಳಗಡೆ ಟೇಬಲ್ ಮೇಲೆ ಇಟ್ಟ 65 ಸಾವಿರ ರೂಪಾಯಿ ಬ್ಯಾಂಕ್ ಪಾಸ್ ಬುಕ್ ಮತ್ತು ಇತರೆ ಕಾಗದ ಪತ್ರ ಇದ್ದ ಹ್ಯಾಂಡ್ ಬ್ಯಾಗ್ ಲಪಟಾಯಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಮುಖ್ಯಮಂತ್ರಿಯವರಿಗೆ ಮನವಿ ನೀಡಲು ಸಿಗಲಿಲ್ಲ ಅವಕಾಶ, ನಡೆಯಿತು ಪ್ರತಿಭಟನೆ.