ಸಿದ್ದಾಪುರ : ಮಳೆಗಾಲ ಮುಗಿದರೂ ಮಳೆಯ ಅವಾಂತರ ಇನ್ನೂ ಕಡಿಮೆಯಾಗಿಲ್ಲ ಕಳೆದ ಎರಡು ದಿನಗಳ ಹಿಂದೆ ವರುಣನ ಅಬ್ಬರದಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅದಷ್ಟೇ ಅಲ್ಲ ಗುಡುಗು-ಸಿಡಿಲಿನ ಮೂಲಕ ಅಬ್ಬರಿಸಿದ ಮಳೆಯಿಂದಾಗಿ ಅವಘಡಗಳು ಸಂಭವಿಸಿದ.

ತಾಲೂಕಿನ ದೊಡ್ಡಮನೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮಾದ್ಲಮನೆ ಯಲ್ಲಿ ಸಿಡಿಲು ಬಡಿದು ಮಂದಿರ ಒಂದಕ್ಕೆ ಹಾನಿಯಾಗಿರುವುದಾಗಿ ವರದಿಯಾಗಿದೆ. ನಗರದ ಪ್ರತಿಷ್ಠಿತ ಸತ್ಯಸಾಯಿ ಮಂದಿರ ಇದಾಗಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ವಿವಿಧ ಕಾರ್ಯದಲ್ಲಿ ಪಡೆದುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಅದೃಷ್ಟ ವಷಾತ್ ದೇವಾಲಯದಲ್ಲಿ ಯಾರು ಇಲ್ಲದ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ.

RELATED ARTICLES  21 ರಂದು ಹೊನ್ನಾರಾಕಾ ದೇವರ ‘ಗಡಿ ಹಬ್ಬ’

ಸಿಡಿಲ ಹೊಡೆತಕ್ಕೆ ಮಂದಿರದ ಗೋಡೆಗಳು ಹಾನಿಯಾಗಿದ್ದು ಮಂದಿರದ ಒಳಭಾಗದಲ್ಲಿದ ಪಾತ್ರೆಗಳು, ಮೈಕ್ ಸಟ್ಟುಗಳು ಸುಟ್ಟು ಕರಕಲಾಗಿದ್ದು ಅಂದಾಜು ಏಳು ಲಕ್ಷದ ವರೆಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

RELATED ARTICLES  ಐವರು ಕಲಾವಿದರಿಗೆ 'ಮಹಾಬಲ' ‌ಪ್ರಶಸ್ತಿ ಪ್ರಕಟ