ಕುಮಟಾ : ಕೋವಿಡ್ ವಿರುದ್ದದ ಹೋರಾಟದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಐತಿಹಾಸಿಕ ದಾಖಲೆ ಮಾಡಿದೆ. ಈ ಸಾಧನೆಗ ಎಲ್ಲೆಡೆಯಿಂದ ಅಭಿನಂದನೆ ವ್ಯಕ್ತವಾಗುತ್ತಿದೆ. 100 ಕೋಟಿ ಲಾಸಿಕಾಕರಣ ಹಿಂದೆ ಅದೆಷ್ಟೋ ಜನರು ಸೇವೆ ಸಲ್ಲಿಸಿದ್ದು ಅವರನ್ನು ಕೊರೋನಾ ವಾರಿಯರ್ಸ್ ಎಂದು ಗುರುತಿಸಿ ಗೌರವಿಸಲಾಗುತ್ತಿದೆ. ಅಂತೆಯೇ ಕುಮಟಾದ ತಾಲೂಕಾಸ್ಪತ್ರೆಯಲ್ಲಿ ಬಿಜೆಪಿ ಕುಮಟಾ ಮಂಡಲದ ವತಿಯಿಂದ ಕೋವಿಡ್ ಸಂದರ್ಭದಲ್ಲಿ ಶ್ರಮಿಸಿದ ವೈದ್ಯರಿಗೂ, ದಾದಿಯರಿಗೂ, ಸಿಬ್ಬಂದಿಗಳಿಗೂ ಮತ್ತು ಕೋವಿಡ್ ಯೋಧರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಕೋವಿಡ್ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಭಾರತ ಮೈಲಿಗಲ್ಲು ಸೃಷ್ಟಿಸಿದೆ. 100 ಕೋಟಿ (1 ಬಿಲಿಯನ್) ಲಸಿಕೆ ವಿತರಿಸಿ ಐತಿಹಾಸಿಕ ಸಾಧನೆ ಮಾಡಿದೆ. ಈ ಕಾರ್ಯಕ್ಕೆ ಸಹಕರಿಸಿದ ಕೊರೋನಾ ವಾರಿಯರ್ಸ್ ಗಳು ನಿಜವಾಗಿಯೂ ಅಭಿನಂದನೆಗೆ ಅರ್ಹರು ಎಂದರು. ನರೇಂದ್ರ ಮೋದಿ ಅವರ ಬಿಜೆಪಿಯವರ ಸರಕಾರ ಕಷ್ಟಕಾಲದಲ್ಲಿ ಜನರ ಜೊತೆಗಿದ್ದು ಜನರ ರಕ್ಷಣೆಗೆ ಮೊದಲ ಆದ್ಯತೆ ನೀಡಿದೆ ಎಂದರು.
ಬಿ.ಜೆ.ಪಿ ಮುಖಂಡರಾದ ಡಾ. ಜಿ.ಜಿ ಹೆಗಡೆ ಮಾತನಾಡಿ ಇಡಿ ವಿಶ್ವವೇ ಮಹಾಮಾರಿ ಯಿಂದ ತತ್ತರಿಸಿ ಹೋಗಿದ್ದ ಸಂದರ್ಭದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡ ಪ್ರಧಾನಿಯವರ ಜೊತೆಗೆ ಕರೋನಾ ನಿಯಂತ್ರಣಕ್ಕೆ ಶ್ರಮಿಸಿದ ವೈದ್ಯರು ಹಾಗೂ ಎಲ್ಲಾ ಆರೋಗ್ಯ ಸಿಬ್ಬಂದಿಗಳು ಅಭಿನಂದನೆಗೆ ಅರ್ಹರು ಎಂದು ಅಭಿಪ್ರಾಯಪಟ್ಟರು. ವೈದ್ಯರು ದಾದಿಯರು ಹಾಗೂ ಕರುನಾ ನಿಯಂತ್ರಣಕ್ಕೆ ಸೇವೆ ಸಲ್ಲಿಸಿದವರು ದೈವೀ ಸ್ವರೂಪರು ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಆಸ್ಪತ್ರೆ ಆಡಳಿತಾಧಿಕಾರಿ ಡಾ ಗಣೇಶ್ ನಾಯ್ಕ್,ಮಂಡಲಾಧ್ಯಕ್ಷ ಶ್ರೀ ಹೇಮಂತಕುಮಾರ ಗಾವಂಕರ್ ,ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಕುಮಟಾ ಮಂಡಲ ಪ್ರಭಾರಿಗಳಾದ ಶ್ರೀಮತಿ ಶಿವಾನಿ ಶಾಂತಾರಾಮ್,ಪುರಸಭಾ ಅಧ್ಯಕ್ಷೆ ಶ್ರೀಮತಿ ಮೋಹಿನಿ ಗೌಡ,ಡಾ ಜಿ ಜಿ ಹೆಗಡೆ,ಶ್ರೀ ಜಿ ಐ ಹೆಗಡೆ,ಆಸ್ಪತ್ರೆಯ ಸಿಬ್ಬಂದಿಗಳು,ಪಕ್ಷದ ಕಾರ್ಯಕರ್ತರು ಹಾಗೂ ಮತ್ತಿತತರು ಉಪಸ್ಥಿತರಿದ್ದರು.