ಕುಮಟಾ :”ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ”, ಉತ್ತರಕನ್ನಡ ಶಾಖೆ ಕುಮಟಾ, ವತಿಯಿಂದ ವತಿಯಿಂದ ಮಹಾತ್ಮಗಾಂಧಿ ಹೈಸ್ಕೂಲ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ “ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ತೊಂದರೆ ಮತ್ತು ಲೈಂಗಿಕ ಶಿಕ್ಷಣದ”ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು..

೭೦ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿ, ಟೀನೆಜ್ (ಹದಿಹರೆಯವು) ಜೀವನದ ಅತೀ ಮುಖ್ಯ ಘಟ್ಟ, ನಮ್ಮೆಲ್ಲ ಕನಸುಗಳಿಗೆ ರೆಕ್ಕೆ ಪುಕ್ಕ ಬರುವಕಾಲ, ಬಾಲ್ಯಾವಸ್ಥೆಯಿಂದ ಪ್ರೌಢರಾಗಿ ಜೀವನದಲ್ಲಿ ನಾವು ಕಂಡ ಕನಸು, ಗುರಿಗಳ ಸಾಧನೆಯ ಅಡಿಪ್ರಾರಂಭವಾಗುವ ಸಮಯ. ಆದರೆಇಂದು ಬದಲಾದ ಸನ್ನಿವೇಶದಲ್ಲಿ ಪ್ರೀತಿ, ಪ್ರೇಮ ಎಂಬ ಆಕರ್ಷಣೆಗೆ ಒಳಗಾಗುವ ಯುವ ಪೀಳಿಗೆ ಜೀವನದ ಅತಿ ಮೌಲ್ಯ ಸಮಯದಲ್ಲಿ ಎಡವುತ್ತಿದ್ದಾರೆ ಎಂಬುದು ವಿಷಾದನೀಯ.

RELATED ARTICLES  ಶಾಸಕ ಸತೀಶ್‌ ಸೈಲ್ ಭಾವಚಿತ್ರವಿದ್ದ ಕಟೌಟ್‌ಗೆ ಸಗಣಿ ಮೆತ್ತಿದ ಕಿಡಿಗೇಡಿಗಳು! ನಡೆದಿದ್ದೇನು ಗೊತ್ತಾ?

ರಕ್ತಹೀನತೆ ,ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ಶಾರೀರಿಕ ಮಾನಸಿಕ,ವರ್ತನೆ, ಸಾಮಾಜಿಕ ಬದಲಾವಣೆ, ಲೈಂಗಿಕ ಶಿಕ್ಷಣದ” ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸುವ ಮೂಲಕ ಸುಮಾರು ೧೫೦ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಕುರಿತಾಗಿ ಈ ಕಾರ್ಯಕ್ರಮದ ಮುಖ್ಯ ಅಥಿತಿ ಹಾಗೂ ಭಾರತೀಯ ಕುಟುಂಬ ಯೋಜನಾ ಸಂಘದ ಮಾಜಿ ವೈದ್ಯಾಧಿಕಾರಿಯಾ ಡಾ// ರಾಧಿಕ ಕೋಡ್ಲೆಕೇರೆರವರು ಉಪನ್ಯಾಸ ನೀಡಿದರು.

RELATED ARTICLES  ಬೆಳಕು ಸಂಸ್ಥೆಯ ಸಹಯೋಗದಲ್ಲಿ ಮುಂದುವರೆದ ಗ್ಯಾಸ್ ವಿತರಣಾ ಕಾರ್ಯಕ್ರಮ

ಭಾರತೀಯ ಕುಟುಂಬ ಯೋಜನಾ ಸಂಘದ ಕಾರ್ಯಕ್ರಮಾಧಿಕಾರಿ ಮಿಸ್ ಮಂಜುಳಾ ಗೌಡರವರು ಕಾರ್ಯಕ್ರಮ ಪ್ರಾಸ್ತಾವಿಕ ಮಾತನಾಡಿದರು.ಸಿಸ್ಟರ ಆದ ಕಮಲಾ ಪಟಗಾರ ಹಾಗೂ ಗೌರಿ ನಾಯ್ಕ ಸಹಕರಿಸಿದರು. ಮಹಾತ್ಮಗಾಂಧಿ ಹೈಸ್ಕೂಲ್‌ನ ಮುಖ್ಯೋಧ್ಯಾಪಕರಾದಂತಹ ಶ್ರೀ ಪಾಂಡುರಂಗ ವಾಘ್ರಕರ್ ಅಧ್ಯಕ್ಷತೆ ವಹಿಸಿ ಅಧ್ಯಕ್ಷಿಯ ಮಾತನಾಡಿದರು. ಮಹಾತ್ಮಗಾಂಧಿ ಹೈಸ್ಕೂಲ್‌ನ ಶಿಕ್ಷಕರಾದ ಶ್ರೀ ಜಟ್ಟಿ ಮುಕ್ರಿ ಸ್ವಾಗತಿಸಿ- ವಂದಿಸಿದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.