ಶಿರಸಿ: ಯಕ್ಷ ಸಂಭ್ರಮ ಟ್ರಸ್ಟ್ (ರಿ) ‘ಶ್ರೀಕೃಷ್ಣ ನಿಲಯ’ ಲಯನ್ಸ ನಗರ, ಯಲ್ಲಾಪುರ ರಸ್ತೆ, ಶಿರಸಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ 7ನೇ ವರ್ಷದ ತಾಳಮದ್ದಲೆ ಸಪ್ತಾಹ-2021 ನ್ನು ನಗರದ ಟಿ.ಎಮ್.ಎಸ್ ಹಾಲ್‌ನಲ್ಲಿ 7ನೇ ವರ್ಷದ ಸಪ್ತಾಹವನ್ನು ಅ.24 ರವಿವಾರದಿಂದ 30 ಶನಿವಾರದವರೆಗೆ ಪ್ರತಿದಿನ ಮಧ್ಯಾಹ್ನ 3.35ರಿಂದ ನಡೆಯಲಿದೆ.

ಯಕ್ಷ ಸಂಭ್ರಮ ಟ್ರಸ್ಟನ್ನು ಹಲವು ವರ್ಷದಿಂದ ಮುನ್ನಡೆಸಿಕೊಂಡು ಬಂದಿದ್ದ ಪ್ರೋ.ಎಂ.ಎ.ಹೆಗಡೆ ಯವರ ಅಗಲುವಿಕೆ ಭರಿಸಲಾಗದ ನಷ್ಟವಾಗಿದ್ದು ಅವರ ಸ್ಮರಣೆಯಲ್ಲಿ ಈ ಸಪ್ತಾಹವನ್ನು “ಮಹಾಬಲ ಸಪ್ತಕ” ಎಂದು ಅವರಿಗೆ ಅರ್ಪಿಸುತ್ತಿದ್ದು, ಟಿಎಂಎಸ್ ಶಿರಸಿ ಅಧ್ಯಕ್ಷ ಜಿ.ಎಂ ಹೆಗಡೆ ಹುಳಗೋಳ ಕಾರ್ಯಕ್ರಮ ಉದ್ಘಾಟಿಸುವರು. ಪ್ರೋ.ಎಂ.ಎ. ಹೆಗಡೆಯವರಿಗೆ ಮರಣೋತ್ತರವಾಗಿ ದಿ||ಚಂದುಬಾಬು ಪ್ರಶಸ್ತಿ ನೀಡಲಿದ್ದು. ವಿ.ಉಮಾಕಾಂತ ಭಟ್ಟರು ನುಡಿನಮನ ಸಲ್ಲಿಸಲಿದ್ದಾರೆ. ಟ್ರಸ್ಟ್’ನ ಅಧ್ಯಕ್ಷ ಕೇಶವ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.

RELATED ARTICLES  ರಾತ್ರಿ ನಾಟಕದ ಪಾತ್ರ ಮಾಡಿದ : ಬೆಳಗ್ಗೆ ದೇವರ ಪಾದ ಸೇರಿದ.

ತಾಳಮದ್ದಲೆ ಕ್ಷೇತ್ರದ ಹಲವಾರು ಸುಪ್ರಸಿದ್ದ ಕಲಾವಿದರ ಕೂಡುವಿಕೆಯಾಗಿದ್ದು, ಸತೀಶ ಶೆಟ್ಟಿ ಪಟ್ಲ, ಕಾವ್ಯಶ್ರೀ ಅಜೇರು, ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹಿಲ್ಲೂರು, ಕೇಶವ ಕೊಳಗಿ, ವಿ.ಗಣಪತಿ ಭಟ್ಟ ರಂಥ ಪ್ರಸಿದ್ಧ ಭಾಗವತರುಗಳಿಂದ. ಮೃದಂಗ, ಚಂಡೆಯಲ್ಲಿಯಲ್ಲಿ ಗಣಪತಿ ಭಾಗ್ವತ್ ಕವಾಳೆ, ಚೈತನ್ಯಕೃಷ್ಣ ಪದ್ಯಾಣ, ನರಸಿಂಹ ಭಟ್ಟ ಹಂಡ್ರಮನೆ, ಶ್ರೀಧರ ವಿಟ್ಲ, ರಾಘವೇಂದ್ರ ಹೆಗಡೆ, ಪ್ರಸನ್ನ ಭಟ್ಟ ಹಾಗೂ ಪ್ರಸಿದ್ಧ ಅರ್ಥದಾರಿಗಳಾದ ವಾಸುದೇವ ರಂಗಾ ಭಟ್ಟ, ವಿ.ಉಮಾಕಾಂತ ಭಟ್ಟ ಕೆರೆಕೈ, ಗಣಪತಿ ಭಟ್ಟ ಸಂಕದಗುಂಡಿ, ಡಿ.ಕೆ ಗಾಂವ್ಕಾರ ಯಲ್ಲಾಪುರ, ವಿ.ರಾಮಚಂದ್ರ ಭಟ್ ಶಿರಳಗಿ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ನಾರಾಯಣ ದೇಸಾಯಿ ಮೈಸೂರು, ಶಂಬು ಶರ್ಮ ವಿಟ್ಲ, ಹರೀಶ ಬಳಂತಿಮೊಗರು, ವಿಶ್ವೇಶ್ವರ ಭಟ್ಟ ಸುಣ್ಣಂಬಳ, ಡಾ.ಪ್ರದೀಪ ಸಾಮಗ, ಪ್ರೊ. ಪವನ ಕಿರಣಕೆರೆ, ವಿ.ಬಾಲಚಂದ್ರ ಭಟ್ ಕರಸುಳ್ಳಿ, ಎಂ.ವಿ ಹೆಗಡೆ ಮುಂತಾದ ಕಲಾವಿದರ ಕೂಡುವಿಕೆಯಲ್ಲಿ ಕಲಾ ರಸಿಕರಿಗೆ ರಸದೌತಣ ನಡೆಯಲಿದೆ.

RELATED ARTICLES  ಮೂರೂರಿನಲ್ಲಿ ಏ. 27ರಿಂದ ರಾಮಕಥಾ

ಸಪ್ತಾಹದ ಪ್ರಥಮ ದಿನ ಅ.24 ರಂದು ಗಜಯಜ್ಞ, ಅ.25ಕ್ಕೆ ದಕ್ಷಾದ್ವರ, ಅ.26ಕ್ಕೆ ಭೃಗು ಶಾಪ, ಅ.27ಕ್ಕೆ ದಮಯಂತಿ ಪುನಃ ಸ್ವಯಂವರ, ಅ.28ಕ್ಕೆ ಸುದರ್ಶನ ವಿಜಯ, ಅ.29ಕ್ಕೆ ಶ್ರೀರಂಗ ತುಲಾಭಾರ, ಅ.30ಕ್ಕೆ ದುರವೀಳ್ಯ ಹಾಗೂ ಕರ್ಣಬೇಧನ ತಾಳಮದ್ದಲೆ ನಡೆಯಲಿದೆ. ಪ್ರತಿ ದಿನವೂ ಯಕ್ಷಸಂಭ್ರಮ ಟ್ರಸ್ಟ್ ಯೂಟ್ಯೂಬ್ ಚಾನೆಲ್’ನಲ್ಲಿ ತಾಳಮದ್ದಲೆ ನೇರ ಪ್ರಸಾರ ನಡೆಯಲಿದ್ದು, ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.