ಹೊನ್ನಾವರ : ತಾಲೂಕಿನ ಪ್ರತಿಷ್ಟಿತ ರಾಗಶ್ರೀ ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ.) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಶ್ರಯದಲ್ಲಿ ‘ಗಾನ – ನಾದ – ಯಕ್ಷವೈಭವ’ ಕಾರ್ಯಕ್ರಮವು ಶ್ರೀವಿಷ್ಣುಮೂರ್ತಿ ದೇವಾಲಯ ಹಡಿನಬಾಳದಲ್ಲಿ ದಿನಾಂಕ : 24/10/2021 ರವಿವಾರ ಸಂಜೆ 5 ಗಂಟೆಯಿಂದ ನಡೆಯಲಿದೆ.
ಇಂಚರ ನಾಯ್ಕ, ಸೌಮ್ಯ ಶೇಟ, ರಂಜಿತಾ ಎನ್, ಶ್ರೀನಿಧಿ ಇವರುಗಳಿಂದ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಗಾಯನ ನಡೆಯಲಿದೆ. ತಬಲಾದಲ್ಲಿ ವಿನಾಯಕ ಹರಡಸೆ, ಸಂವಾದಿನಿಯಲ್ಲಿ ಹರಿಶ್ಚಂದ್ರ ನಾಯ್ಕ ಇಡಗುಂಜಿ ಭಾಗವಹಿಸಲಿದ್ದಾರೆ.
ಚಿಟ್ಟಾಣಿ ಕಲಾಬಳಗ ಇವರಿಂದ ಲವ ಕುಶ ಯಕ್ಷಗಾನ ಆಖ್ಯಾನ ನಡೆಯಲಿದ್ದು, ಹಿಮ್ಮೇಳದಲ್ಲಿ : ಭಾಗವತರು – ಸರ್ವೇಶ್ವರ ಹೆಗಡೆ ಮೂರುರು ಮೃದಂಗ- ಸುನಿಲ ಭಂಡಾರಿ ಕಡತೋಕ, ಚಂಡೆ – ಗಜಾನನ ಸಾಂತೂರು ಭಾಗವಹಿಸುವರು.
ಮುಮ್ಮೇಳದಲ್ಲಿ : ಸುಬ್ರಹ್ಮಣ್ಯ ಚಿಟ್ಟಾಣಿ, ನರಸಿಂಹ ಚಿಟ್ಟಾಣಿ, ಕಾರ್ತೀಕ ಚಿಟ್ಟಾಣಿ, ವಿನಯ ಬೇರೊಳ್ಳಿ , ಶ್ರೀಪಾದ ಭಟ್ಟ ಹಡಿನಬಾಳ, ಹಾಸ್ಯ – ನಾಗೇಂದ್ರ ಮೂರುರು ಇರಲಿದ್ದಾರೆ. ಕೋವಿಡ್ ನಿಯಮಾನುಸಾರ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲ ಕಲಾಭಿಮಾನಿಗಳು ಹಾಜರಿದ್ದು ಕಾರ್ಯಕ್ರಮ ಚಂದ ಕಾಣಿಸಬೇಕೆಂದು ಸಂಘಟಕರಾದ ಶಿವಾನಂದ ಭಟ್ ಹಾಗೂ ಎನ್.ಜಿ ಹೆಗಡೆ ವಿನಂತಿಸಿದ್ದಾರೆ.